ಪುತ್ತೂರು: ಪುತ್ತೂರು ಕ್ರಿಕೆಟ್ ಅಕಾಡೆಮಿಯಿಂದ ತರಬೇತಿ ಪಡೆಯುತ್ತಿರುವ ಪ್ರತಿಭಾವಂತ ಆಟಗಾರರಾದ ದಿಶಾನ್ ಮತ್ತು ಆದಿತ್ಯ ಎಸ್. ಬೌದ್, ಕ್ರಿಕೆಟ್ ನಲ್ಲಿ ಮೈಸೂರು ವಿಭಾಗ ಮಟ್ಟ (Under–14)ಕ್ಕೆ ಆಯ್ಕೆಯಾಗಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲೆ (SGFI)ಯ ಪರವಾಗಿ ಪ್ರತಿನಿಧಿಸಲಿದ್ದಾರೆ.
ಪುತ್ತೂರು ಕ್ರಿಕೆಟ್ ಅಕಾಡೆಮಿಯ ತರಬೇತುದಾರ ಮತ್ತು ಪ್ರಶಿಕ್ಷಕ ಕೆ. ಹರಿಶ್ಚಂದ್ರ ಆಚಾರ್ಯರು ತರಬೇತಿ ನೀಡುತ್ತಿದ್ದಾರೆ. “ಈ ಸಾಧನೆ ಮುಂದಿನ ತಲೆಮಾರಿನ ಕ್ರಿಕೆಟಿಗರಿಗೆ ಮಾದರಿಯಾಗಲಿದೆ” ಎಂದು ಅಕಾಡೆಮಿ ವಲಯ ತಿಳಿಸಿದೆ.