ಪುಣ್ಚಪ್ಪಾಡಿ ಸಮರ್ಥ ಜನಸೇವಾ ಟ್ರಸ್ಟ್‌‌ ವತಿಯಿಂದ ಪತ್ರಕರ್ತ ಉಮಾಪ್ರಸಾದ್ ರೈಯವರಿಗೆ ಸನ್ಮಾನ

0


ಪುತ್ತೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ‌ ಸುದ್ದಿ ಬಿಡುಗಡೆ ದಿನಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು ರವರನ್ನು ‌ಸಮರ್ಥ ಜನಸೇವಾ ಟ್ರಸ್ಟ್‌ ಪುಣ್ಚಪ್ಪಾಡಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಉಮಾಪ್ರಸಾದ್ ರೈ ನಡುಬೈಲುರವರು‌‌ 1993 ರಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಪುತ್ತೂರಿನ ಸುದ್ದಿ ಬಿಡುಗಡೆ ದಿನಪತ್ರಿಕೆಯಲ್ಲಿ 20 ವರ್ಷಗಳಿಂದ ವರದಿಗಾರರಾಗಿದ್ದು, ಪತ್ರಿಕಾ ಕ್ಷೇತ್ರದಲ್ಲಿ 32 ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ಸಮರ್ಥ ಜನಸೇವಾ ಟ್ರಸ್ಟ್‌ ನ ಅಧ್ಯಕ್ಷ ಗಿರಿಶಂಕರ ಸುಲಾಯ ರವರು‌ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಹೇಶ್‌ ಕೆ ಸವಣೂರು, ಜೊತೆ ಕಾರ್ಯದರ್ಶಿ ನಾಗರಾಜ ನಿಡ್ವಣ್ಣಾಯ, ಕೋಶಾಧಿಕಾರಿ ಶೀನಪ್ಪ ಶೆಟ್ಟಿ ನೆಕ್ರಾಜೆ, ಟ್ರಸ್ಟ್‌ಗಳಾದ ನಾಗೇಶ್‌ ಓಡಂತರ್ಯ, ರಾಜೇಶ್ವರಿ ಕನ್ಯಾಮಂಗಲ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಯಶೋಧ ನೂಜಾಜೆ ವೇದಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here