ಪುತ್ತೂರು: ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹೆಣ್ಣು ಮಕ್ಕಳಿಗೆ ಹದಿಹರೆಯದ ವಿಚಾರಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.

, ದೈಹಿಕ ,ಮಾನಸಿಕ ,ಶಾರೀರಿಕ ಮತ್ತು ಸಾಮಾಜಿಕ ಬದಲಾವಣೆ ಹೊಂದುತ್ತಿರುವ ಸಮಯದಲ್ಲಿ ಹೆಣ್ಣು ಮಕ್ಕಳು ಗಮನಹರಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾಕ್ಟರ್ ವಿಜಯ ಸರಸ್ವತಿ ಇವರು ಮಾಹಿತಿ ನೀಡಿದರು. ಬಾಲ್ಯದಿಂದಲೇ ನಮ್ಮ ಆಲೋಚನೆಗಳ ಬಗ್ಗೆ ಅನುಭವಗಳ ಬಗ್ಗೆ ಮತ್ತು ದೈನಂದಿನ ಬದುಕಿನಲ್ಲಿ ನಾವು ನಿರ್ವಹಿಸುವ ವಿಚಾರಗಳ ಬಗ್ಗೆ ಪೋಷಕರೊಂದಿಗೆ ,ಶಾಲಾ ಶಿಕ್ಷಕರೊಂದಿಗೆ ಮುಕ್ತವಾಗಿ ತಿಳಿಸುವ ಮನೋಭಾವವನ್ನು ಕೂಡ ಬೆಳೆಸಿಕೊಳ್ಳಬೇಕು. ಇದರಿಂದ ಅನೇಕ ಸವಾಲುಗಳನ್ನು ನಿರ್ವಹಿಸುವ ಸಾಮರ್ಥ್ಯ ನಮ್ಮಲ್ಲಿ ಬೆಳೆಯುತ್ತದೆ ಎಂದು ತಿಳಿಸಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಶಾಲೆಯ ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು. ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ರೂಪಲೇಖ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಾಗೂ ಶಿಕ್ಷಕಿ ಪವಿತ್ರ ವಂದಿಸಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ , ನಳಿನಿ, ಇನ್ನರ್ ವೀಲ್ ಕಾರ್ಯದರ್ಶಿ ಸಂಧ್ಯಾ ಸಾಯ ಸದಸ್ಯರುಗಳಾದ ಪ್ರಮೀಳಾ ರಾವ್ ,ಪುಷ್ಪ ಕೆಪಿ, ನಿರ್ಮಲಾ ಬಿಕೆ ,ಶಂಕರಿ ಎಂ ಎಸ್ ಭಟ್ ಹಾಗೂ ಶಾಲಾ ಶಿಕ್ಷಕಿಯ ರು ಉಪಸ್ಥಿತರಿದ್ದರು.