ಆಲಂಕಾರು: ಕಲ್ಲಡ್ಕ ರಾಮಮಂದಿರದಲ್ಲಿ ನಡೆದ ವಿದ್ಯಾಭಾರತಿಯ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಒಳಗೊಂಡ ಸೌತ್ ಝೋನ್ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಲಂಕಾರು ಭಾರತಿ ವಿದ್ಯಾಸಂಸ್ಥೆಯ ಕಬಡ್ಡಿ ಪಟುಗಳಾದ ತೃಷಾ ಕೋಡಂದೂರು -ಚಾರ್ವಾಕ, ಧನ್ಯಶ್ರೀ ಅರ್ಬಿ, ಸಾತ್ವಿಕಾ ಕೆದ್ದೋಟ್ಟೆ, ಧ್ರುವಿ ಬಾಕಿಲ ಚಾರ್ವಾಕ, ಶ್ರವಣ್ ಕೋಡಿಲ, ಎಸ್.ಲಿಖಿತ್ ಶಾಂತಿಮೊಗರು ಇವರುಗಳು ನವಂಬರ್ 13 ರಿಂದ 17ರ ತನಕ ಮಧ್ಯಪ್ರದೇಶ ರಾಜ್ಯದ ಬೈತುಲ್ ನಲ್ಲಿ ನಡೆಯುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ

ಇವರಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರ ಸಹಕಾರದೊಂದಿಗೆ ದೈಹಿಕ ಶಿಕ್ಷಕ ಮಾಯಿಲಪ್ಪ ಗೌಡ, ತಂಡ ದ ತರಬೇತುದಾರ ಶಿಕ್ಷಕ ಚಂದ್ರಹಾಸ ಕೆ. ಸಿ ಕುಂಟ್ಯಾನ ತರಬೇತಿ ನೀಡಿರುತ್ತಾರೆ.