ಉಪ್ಪಿನಂಗಡಿ: ನವರಾತ್ರಿ ಹಬ್ಬದ ಮೊದಲ ದಿನವಾದ ಸೋಮವಾರ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ದೇಗುಲದಲ್ಲಿ ಭಕ್ತಾಧಿಗಳಿಗೆ ತೆನೆ ವಿತರಣೆಯನ್ನು ದೇವಳದ ಪ್ರಧಾನ ಅರ್ಚಕರಾದ ಹರೀಶ ಉಪಾಧ್ಯಾಯ ಪೂಜಾ ವಿಧಿವಿಧಾನ ಮೂಲಕ ನಡೆಸಿಕೊಟ್ಟರು.

ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾೖಕ್, ಸಮಿತಿ ಸದಸ್ಯರಾದ ಅರ್ತಿಲ ಕೃಷ್ಣರಾವ್, ಸೋಮನಾಥ ರಾಮನಗರ, ಅನಿತಾ, ಬಿ.ದೇವದಾಸ ರೈ, ಡಾ. ರಮ್ಯ ರಾಜಾರಾಮ್ ಕೆ.ಬಿ., ವೆಂಕಪ್ಪ ಪೂಜಾರಿ, ಪ್ರಮುಖರಾದ ಯು.ರಾಮ, ಕಂಗ್ವೆ ವಿಶ್ವನಾಥ ಶೆಟ್ಟಿ, ಸದಾನಂದ ಕಾರ್ಕ್ಲಬ್, ಪುರಂದರ ನಟ್ಟಿಬೈಲ್, ಕಿಶೋರ್ ಜೋಗಿ ಮತ್ತಿತರರು ಉಪಸ್ಥಿತರಿದ್ದು, ವ್ಯವಸ್ಥಾಪಕ ವೆಂಕಟೇಶ ರಾವ್, ಗುಮಾಸ್ತ ದಿವಾಕರ ಗೌಡ ಹಾಗೂ ಕೃಷ್ಣಪ್ರಸಾದ ಬಡಿಲ, ಪದ್ಮನಾಭ ಕುಲಾಲ್ ಸಹಕರಿಸಿದರು.