ಬಡಗನ್ನೂರು: ಆದಿದೈವ ಧೂಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸಂಕೀರ್ತನೆ ಮತ್ತು ನವರಾತ್ರಿ ಉತ್ಸವವನ್ನು ಉಪ್ಪಿನಂಗಡಿಯ ಉದ್ಯಮಿ ಎಮ್ ವರದರಾಜ್ ರವರ ದಿವ್ಯ ಹಸ್ತದಲ್ಲಿ ದೀಪ ಬೆಳಗಿಸುವ ಮುಖಾಂತರ ಪ್ರಾರಂಭಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಜಯಂತ ನಡುಬೈಲು, ಶ್ರೀಧರ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಮೋಹನ್ ದಾಸ್ ಬಂಗೇರ, ಉಲ್ಲಾಸ್ ಕೋಟ್ಯಾನ್, ಹೇಮಲತಾ ರಘು ಸಾಲಿಯಾನ್, ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಕುರಿಕಾರ, ಆರ್ ಸಿ ನಾರಾಯಣ, ಆದಿಶಕ್ತಿ ಭಜನಾ ಮಂಡಳಿ ಸದಸ್ಯೆ ರೇಖಾ ನಾಗರಾಜ್ ಪಟ್ಟೆ, ಶಾಲಿನಿ ರವಿ ಪೂಜಾರಿ, ಜನಾರ್ದನ ಪೂಜಾರಿ ನೂಜಾ, ಮುಂತಾದ ಗಣ್ಯರು ಹಾಜರಿದ್ದರು. 9 ದಿನಗಳ ಕಾಲ ನಿರಂತರ ನಡೆಯುವ ನವರಾತ್ರಿ ಉತ್ಸವದಲ್ಲಿ ಸರ್ವ ಶಕ್ತಿಗಳಿಗೆ ವಿಶೇಷ ಅಲಂಕಾರ, ಅವಳಿ ಮಕ್ಕಳಿಗೆ ಅಕ್ಷರಾಭ್ಯಾಸ, ಅನ್ನಪ್ರಸಾದ ಸೇವೆ, ವಾಹನ ಪೂಜೆ, ಮುಂತಾದ ವಿಶೇಷ ಕಾರ್ಯಕ್ರಮಗಳು ಜರಗಲಿರುವುದು ಎಂದು ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಕೆ.ಬಿ ರಾಜಾರಾಮ್ ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.