ಬದ್ರಿಯಾ ಜುಮಾ ಮಸೀದಿಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ

0

ಪುತ್ತೂರು: ಸೆ.21 ರಂದು ಸಂಪ್ಯದಲ್ಲಿ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸಂದರ್ಭ ಆಗಮಿಸಿದ ರಾಜ್ಯ ಸರಕಾರದ ಸ್ಪೀಕರ್ ಯು.ಟಿ ಖಾದರ್ ರವರು ಉದ್ಘಾಟನೆ ನೆರವೇರಿಸಿದ ಬಳಿಕ ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಗೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್ ರವರು, ಜನಗಣತಿ ಎಂಬುದು ಸರಕಾರಕ್ಕಾಗಲಿ, ಅಧಿಕಾರಿಗಳಿಗಾಗಲಿ ಮಾಡುವುದಲ್ಲ. ನಮಗಾಗಿ ಮಾಡುವುದು. ಬ್ರಿಟಿಷರ ಕಾಲದಲ್ಲಿ ಅಥವಾ ಈವಾಗ ಕೂಡ ಸಂಪೂರ್ಣ ಜನಗಣತಿ ಆಗಿರುವುದಿಲ್ಲ. ಮನೆಯಲ್ಲಿನ ಎಲ್ಲಾ ಸದಸ್ಯರ ಹೆಸರು ರೇಷನ್ ಕಾರ್ಡ್ ನಲ್ಲಿ ಆಧಾರ್ ಜೊತೆಗೆ ಒಂದು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿಟ್ಟರೆ ಒಳ್ಳೆಯದು. ಆದ್ದರಿಂದ ಜನಗಣತಿಗೆ ಎಲ್ಲರೂ ಸಹಕಾರ ಕೊಡಿ ಎಂದರು. 

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮಸೀದಿಯ ಅಧ್ಯಕ್ಷ ಅಬ್ದುಲ್ಲ ಕೆ, ಪ್ತಧಾನ ಕಾರ್ಯದರ್ಶಿ ರಹಮತುಲ್ಲ, ಕೋಶಾಧಿಕಾರಿ ಹಮೀದ್ ಕೆ, ಜಬ್ಬಾರ್ ಐಡಿಯಲ್ ಬಿ.ಸಿ ರೋಡ್, ಆದಂ ಝಂಝಂ, ಇಸಾಕ್ ಮೊಟ್ಟೆತ್ತಡ್ಕ ಸಹಿತ ಹಲವರು ಉಪಸ್ಥಿತರಿದ್ದರು. ರಫೀಕ್ ಎಂ.ಕೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here