ಸೆ.25 ಬಿ.ವಿ.ಸೂರ್ಯನಾರಾಯಣ ರವರ ‘ಮೊಗ್ಗು ಅರಳುವ ಮುನ್ನ’ ಕೃತಿ ಲೋಕಾರ್ಪಣೆ

0

ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ಸಹಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸಚ್ಚಿದಾನಂದ ಸೇವಾಸದನ, ವಿನಾಯಕನಗರ, ದರ್ಬೆ, ಪುತ್ತೂರು, ಇದರ ವತಿಯಿಂದ ಪ್ರಕಾಶನಗೊಳ್ಳುತ್ತಿರುವ ಬಿ.ವಿ.ಸೂರ್ಯನಾರಾಯಣ ರವರು ಬರೆದ ‘ಮೊಗ್ಗು ಅರಳುವ ಮುನ್ನ’ ಕೃತಿಯ ಲೋಕಾರ್ಪಣಾ ಸಮಾರಂಭ ಸೆ.25 ರಂದು ಸಂಜೆ 4 ಗಂಟೆಗೆ ದರ್ಬೆ, ವಿನಾಯಕನಗರದಲ್ಲಿರುವ ಸಚ್ಚಿದಾನಂದ ಸೇವಾಸದನದಲ್ಲಿ ನಡೆಯಲಿದೆ.


ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ರವರು ಸಮಾರಂಭದ ಸಭಾಧ್ಯಕ್ಷತೆ ವಹಿಸಲಿದ್ದು, ಅಡಿಕೆ ಪತ್ರಿಕೆಯ ಸಂಪಾದಕರಾದ ನಾ. ಕಾರಂತ ಪೆರಾಜೆಯವರು ‘ಮೊಗ್ಗು ಅರಳುವ ಮುನ್ನ’ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.


ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಸುದ್ದಿ ಬಿಡುಗಡೆ ಪತ್ರಿಕೆಯ ‘ಪ್ರತಿಭಾರಂಗ’ ಅಂಕಣಕಾರರಾದ ನಾರಾಯಣ ರೈ ಕುಕ್ಕುವಳಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸ.ಹಿ.ಪ್ರಾ. ಶಾಲೆ, ಭಕ್ತಕೋಡಿ ಇಲ್ಲಿನ ಸಹಶಿಕ್ಷಕಿ ಸುನೀತಾ ಯನ್. ಕೃತಿ ಪರಿಚಯ ಮಾಡಲಿದ್ದಾರೆ. ‘ಮೊಗ್ಗು ಅರಳುವ ಮುನ್ನ’ ಕೃತಿಯ ಲೇಖಕರಾದ ನಿವೃತ್ತ ಪ್ರಾಂಶುಪಾಲ ಬಿ. ವಿ. ಸೂರ್ಯನಾರಾಯಣ ಎಲಿಯ ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here