ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಸೆ.22ರಂದು ಗಣಪತಿ ಹವನ, ಶಾರದಾ ಪೂಜೆ, ಆಯುಧ ಪೂಜೆ ಮತ್ತು ವಾಹನ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಮಂಡಳಿಯ ಟ್ರಸ್ಟಿಗಳಾದ ವೃಂದಾ ಜೆ ರೈ, ದೇವಿಕಿರಣ್ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಜ್ಞಾನೇಶ್ವರಿ, ಮುಖ್ಯಗುರುಗಳು, ಎಲ್ಲಾ ಶಿಕ್ಷಕ- ಶಿಕ್ಷಕೇತರ ವೃಂದದವರು , ವಿದ್ಯಾರ್ಥಿಗಳು ಮತ್ತು ಪೋಷಕ ಬಂಧುಗಳು ಉಪಸ್ಥಿತರಿದ್ದರು. ಪ್ರಶಾಂತ್ ಭಟ್ ಕಟ್ಟತ್ತಾರು ಪೌರೋಹಿತ್ಯ ನಡೆಸಿಕೊಟ್ಟರು.

ಕಾರ್ಯಕ್ರಮದ ವಿಶೇಷ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶಂಖನಾದ ಸ್ಪರ್ಧೆ, 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹೂವಿನ ಮಾಲೆ ಕಟ್ಟುವ ಸ್ಪರ್ಧೆಯು ನಡೆಯಿತು. ಬಾಲಶಾರದೆಯ ವೇಷಧಾರಿಯಾಗಿ ಪ್ರೀ ಕೆ ಜಿ ಯ ಪುಟಾಣಿ ಸಂಸ್ಥಿತ ವಿ ರೈ ಭಕ್ತಿ ಭಾವದಿಂದ ಕಂಗೊಳಿಸಿದರು. ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿವೃಂದದಿಂದ ಭಜನೆ ಸಂಕೀರ್ತನೆಯು ಭಕ್ತಿಭಾವದಿಂದ ನಡೆಯಿತು.