ಬಡಗನ್ನೂರು: ಸಂಜೀವಿನಿ ಒಕ್ಕೂಟ ವತಿಯಿಂದ 2025 -26 ಸಾಲಿನ ಗ್ರಾಮ ಸಮೃದ್ಧಿ ಸ್ಥಿತಿಸ್ಥಾಪಕತ್ವ ಯೋಜನೆ ಪೂರ್ವಭಾವಿ ಸಭೆಯು ಸೆ.22ರಂದು ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಸಂಪನ್ಮೂಲ ವ್ಯಕ್ತಿ ವಿದ್ಯಾಶ್ರೀ ಗ್ರಾಮ ಸಮೃದ್ಧಿ ಸ್ಥಿತಿಸ್ಥಾಪಕತ್ವ ಯೋಜನೆ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಗ್ರಾಮ ಸಮೃದ್ಧಿ ಯೋಜನೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಭಾಗವಾಗಿದ್ದು, ಸಮುದಾಯದ ಅಗತ್ಯತೆಗಳನ್ನು ಗುರುತಿಸಿ ಬಡತನ ನಿರ್ಮೂಲನೆ ಮಾಡುವ ಯೋಜನೆಯಾಗಿದೆ ಎಂದು ಹೇಳಿದರು. ಬಳಿಕ ಗ್ರಾಮದ 6 ವಾರ್ಡ್ ಮಟ್ಟದ ನಕ್ಷೆಯನ್ನು ತಯಾರಿಸಿ, ದಿನಾಂಕ ನಿಗದಿಪಡಿಸಸಲಾಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಕೆ ಸುಬ್ಬಯ್ಯ, ಕಾರ್ಯದರ್ಶಿ ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾ. ಪಂ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ಧರ್ಮೆಂದ್ರ ಕುಲಾಲ್ ಪದಡ್ಕ, ವೆಂಕಟೇಶ್ ಕನ್ನಡ್ಕ, ಲಿಂಗಪ್ಪ ಮೋಡಿಕೆ, ರವಿಚಂದ್ರ ಸಾರೆಪ್ಪಾಡಿ, ವಸಂತ ಗೌಡ ಕನ್ನಯ, ಕಲಾವತಿ ಗೌಡ ಪಟ್ಲಡ್ಕ, ಸವಿತಾ ನೇರೋಳ್ತಡ್ಕ, ಹೇಮಾವತಿ ಮೋಡಿಕೆ ಜ್ಯೋತಿ ಅಂಬಟೆಮೂಲೆ, ದಮಯಂತಿ ಕೆಮನಡ್ಕ, ಸಂಜೀವಿನಿ ಒಕ್ಕೂಟದ ಎಂ. ಬಿ. ಕೆ ರಮ್ಯಾ ಹಾಗೂ ಅಂಗನವಾಡಿ ಕಾರ್ಯಕರ್ತರು,, ಆರೋಗ್ಯ ಕೇಂದ್ರದ ಸಿಹೆಚ್ಒಗಳು,, ಆಶಾ ಕಾರ್ಯಕರ್ತೆಯರು, ಕೃಷಿ ಸಖಿ, ಪಶು ಸಖಿ ಮತ್ತು ಸಂಜೀವಿನಿ ಒಕ್ಕೂಟ ಪದಾಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.