ಪುತ್ತೂರು: ಎಪಿಎಂಸಿ ರಸ್ತೆ ಸಿಟಿ ಆಸ್ಪತ್ರೆ ಬಳಿಯ ಡಾಯಸ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಕರ ಸಹಕಾರ ಸಂಘ ನಿಯಮಿತ ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಸೆ.23ರಂದು ಪೂರ್ವಾಹ್ನ ಜರಗಿತು.

ಸಂಘದ ಅಧ್ಯಕ್ಷರಾಗಿರುವ ಮಾಮಚ್ಚನ್ ಎಂ.ರವರು ಮಾತನಾಡಿ, ವರದಿ ವರ್ಷದಲ್ಲಿ 346 ಸದಸ್ಯರಿದ್ದು ಸಂಘವು ರೂ.4 ಕೋಟಿ ವ್ಯವಹಾರ ನಡೆಸಿರುತ್ತದೆ. ಪುತ್ತೂರು ತಾಲೂಕು ಸಂಘದ ಕಾರ್ಯಕ್ಷೇತ್ರವಾಗಿದ್ದು ಗ್ರಾಹಕರು ಸಂಘದ ಮೇಲೆ ಅಭಿಮಾನ ಇಟ್ಟು ಠೇವಣಿ, ಸಾಲ ನೀಡುವಿಕೆ, ಸಾಲದ ಮರುಪಾವತಿ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಸಂಘದ ನಿರ್ದೇಶಕರ, ಸಿಬ್ಬಂದಿಗಳ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಯಲ್ಲಿ ಪ್ರತಿಯೋರ್ವರು ಕೈಜೋಡಿಸಬೇಕು. ಸಂಘವು ಠೇವಣಿ ಮೇಲೆ ಅಧಿಕ ಬಡ್ಡಿ ನೀಡುತ್ತಿದ್ದು ಗ್ರಾಹಕರು ನಮ್ಮ ಸಂಘದಲ್ಲಿ ಠೇವಣಿ ಇರಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಸಂಘದ ನಿರ್ದೇಶಕರಾದ ರಾಜಶೇಖರ ಎಂ, ಬಾಬು ಟಿ, ಶ್ರೀಕಾಂತ್ ನಾಯ್ಕ ಎಂ, ಮೋನಪ್ಪ ಪಟ್ಟೆ, ಶ್ರೀಮತಿ ರತ್ನಕುಮಾರಿ ಪಿ.ಕೆ, ಶ್ರೀಮತಿ ಸುಮತಿ ಎ.ಆರ್, ಶ್ರೀಮತಿ ಸುನೀಲ, ಶ್ರೀಮತಿ ಮೋಲಿ ಫೆರ್ನಾಂಡೀಸ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಜೋ ಜೇಕಬ್, ಸಿಬ್ಬಂದಿ ಶ್ವೇತಾರವರು ಲೆಕ್ಕಪರಿಶೋಧನಾ ವರದಿ, ಲೆಕ್ಕಪರಿಶೋಧನಾ ವರದಿ ಬಿಡುಗಡೆ ಪತ್ರ, ಜಮಾ ಖರ್ಚು ಪತ್ರಿಕೆ, ಲಾಭ ಹಾನಿ ಪತ್ರಿಕೆ, ಆಸ್ತಿ-ಜವಾಬ್ದಾರಿ ತಖ್ತೆ, ಲೆಕ್ಕ ಪರಿಶೋಧನಾ ವರ್ಗೀಕರಣ ತಖ್ತೆ ಇತ್ಯಾದಿ ಓದಿದರು. ನಿರ್ದೇಶಕಿ ಸ್ಮಿತಾಶ್ರೀ ಪ್ರಾರ್ಥಿಸಿದರು.ಸಂಘದ ಉಪಾಧ್ಯಕ್ಷ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಸ್ವಾಗತಿಸಿ, ನಿರ್ದೇಶಕ ಅಬ್ದುಲ್ ಬಶೀರ್ ವಂದಿಸಿದರು. ನಿರ್ದೇಶಕ ಗಿರೀಶ್ ಡಿ. ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ..
ರಾಷ್ಟ್ರಮಟ್ಟದಲ್ಲಿ ಗುರುತಿಸಿರುವ ವೀರಮಂಗಿಲ ಪಿಎಂಶ್ರೀ ಶಾಲೆಯ ಶಿಕ್ಷಕರಾಗಿದ್ದು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ತಾರಾನಾಥರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತ ತಾರಾನಾಥ್ ರವರ ಪತ್ನಿ ಮಣಿಕ್ಕರ ಶಾಲೆಯ ಶಿಕ್ಷಕಿ ವಸಂತಿ ಉಪಸ್ಥಿತರಿದ್ದರು.