ಅಕ್ಷಯ ಕಾಲೇಜಿನಲ್ಲಿ ಆತಿಥ್ಯ ವಿಜ್ಞಾನ ವಿಭಾಗದ ‘ಕಾಯು’ ಸಂಘ ಉದ್ಘಾಟನೆ

0

ಪುತ್ತೂರು: ನಗರದ ಅಕ್ಷಯ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗದ ವತಿಯಿಂದ ಇತ್ತೀಚೆಗೆ ವಿಭಾಗದ ನೂತನ ಸಂಘ “ಕಾಯು” ಮತ್ತು ಅದರ ಲೋಗೋವನ್ನು ಕಾಲೇಜು ಸಭಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು.

 ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ಯಾಸ್ಪರ್ ರೆಸ್ಟೋರೆಂಟ್, ಲುಟಿನಾ ಯುರೋಪ್‌ನ ಮುಖ್ಯ ಬಾಣಸಿಗ ನವೀನ್ ಶಂಕರ್ ಮಾತನಾಡಿ, ಆತಿಥ್ಯ ಉದ್ಯಮದಲ್ಲಿ ವೃತ್ತಿಪರತೆ, ಬೆಳವಣಿಗೆ ಮತ್ತು ಸಮರ್ಪಣಾ ಮನೋಭಾವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿಧ ಹೋಂ ಬೇಕರ್ ಮೇಘಾ ಕುಕ್ಕುಂಜೆ ಅವರು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸಿನಿಂದ ಬೇಕಿಂಗ್ ಇಂಡಸ್ಟ್ರಿ, ಸ್ವಂತ ಉದ್ಯಮ ಪ್ರಾರಂಭಕ್ಕೆ ಯಾವ ರೀತಿಯಲ್ಲಿ ಸಹಾಯವಾಗುತದೆ ಹಾಗು ಈ ಕೋರ್ಸ್ನ ವಿಸ್ತಾರತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಮಾತನಾಡಿ  ವೃತಿಪರ ಶಿಕ್ಷಣ ನೀಡುವ ಉದೇಶದಿಂದ  3 ವರ್ಷದಿಂದ ಬಿ.ಎಚ್.ಎಸ್ ಕೋರ್ಸ್ ಆರಂಭಿಸಿದೆ ಮುಂದೆ “ಕಾಯು” ಅಸ್ಸೋಸಿಯೇಷನ್ನಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಕಾರ್ಯಕ್ರಮ ನಡೆಯಲಿ ಎಂದು ಶುಭಹಾರೈಸಿದರು.

ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಕಚೇರಿ ಸಹಾಯಕ ಅಶ್ವತ್, ಡಿಸೈನರ್ ಸಂತೋಶ್, ಹೌಸ್‌ಕೀಪಿಂಗ್ ಸಿಬ್ಬಂದಿಗಳಾದ ಸುಜಾತ, ಯಶೋದಾ ಮತ್ತು ದಯಾಮಣಿರನ್ನು ಸನ್ಮಾನಿಸಲಾಯಿತು.

ವಿಭಾಗದ ಮುಖ್ಯಸ್ಥರಾದ ಅವಿನಾಶ್ ಅವರು ಪ್ರಾಸ್ತಾವಿಕ ಮಾತನಾಡಿದರು. ದ್ವಿತೀಯ ಬಿ.ಎಚ್.ಎಸ್ ಕಿಶನ್ ಸ್ವಾಗತಿಸಿ , ತೃತೀಯ ಬಿ.ಎಚ್.ಎಸ್ ಸಿಂಚನ್  1 BHS ವಿದ್ಯಾರ್ಥಿ ರಶ್ವಿನ್ ಅತಿಥಿಗಳನ್ನು ಪರಿಚಯಿಸಿದರು. ಬಿ.ಎಚ್.ಎಸ್ ವಿಭಾಗದ ಉಪನ್ಯಾಸಕರಾದ ಪ್ರಜ್ವಲ್ ಆಲ್ಬರ್ಟ್ ಡಿಸೋಜಾ ವಂದಿಸಿದರು. 1 BHS ವಿದ್ಯಾರ್ಥಿನಿ ಹರ್ಷಿತಾ ನಿರೂಪಿಸಿದರು.

LEAVE A REPLY

Please enter your comment!
Please enter your name here