ಪುತ್ತೂರು: ದಕ್ಷಿಣ ಕನ್ನಡ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಳ್ಯ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ತಿಮ್ಮಪ್ಪ ಪಾಟಾಳಿಯವರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಇವರನ್ನು ಪೌರ ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಗೌರವಾರ್ಪಣೆ ಸಲ್ಲಿಸಿ ಅಭಿನಂದಿಸಲಾಯಿತು.
ಸುಳ್ಯ ಕ್ಷೇತ್ರ ದ ಶಾಸಕರಾದ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ಯೋಜನಾ ಪ್ರಾಧಿಕಾರ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ, ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮಾಜಿ ಅಧ್ಯಕ್ಷರಾದ ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಸದಸ್ಯರಾದ ಕೆ.ಎಸ್. ಉಮ್ಮರ್, ಬಾಲಕೃಷ್ಣ ಭಟ್, ಧೀರ ಕ್ರಾಸ್ತ, ಶಿಲ್ಪ ಸುದೇವ್, ಶೀಲಾ ಕುರುಂಜಿ, ನಾರಾಯಣ ಶಾಂತಿನಗರ, ರಾಜು ಪಂಡಿತ್, ಮುಖ್ಯಾಧಿಕಾರಿ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು.