ಪುತ್ತೂರು: ಆರ್ಕಿಟೆಕ್ಚರ್(ವಾಸ್ತುಶಿಲ್ಪ), ಇಂಟೀರಿಯರ್(ಒಳಾಂಗಣ), ಪ್ಲ್ಯಾನಿಂಗ್(ಯೋಜನೆ)ವನ್ನೊಳಗೊಂಡ ಅದ್ವಯ ವಿನ್ಯಾಸ ಸ್ಟುಡಿಯೋ ಸೆ.25ರಂದು ಬಪ್ಪಳಿಗೆ-ಪುತ್ತೂರಿನ ಬೈಪಾಸ್ ರಸ್ತೆಯ ಸಮೃದ್ಧಿ ಸಂಕೀರ್ಣದ ಮೂರನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಂಸದ ಕ್ಯಾ|ಬೃಜೇಶ್ ಚೌಟ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ದೇವಾಲಯ ವಾಸ್ತುಶಿಲ್ಪಿ ಎಂ.ಎಸ್ ಪ್ರಸಾದ್ ಮುನಿಯಂಗಳ, ರೋಟರಿ ಜಿಲ್ಲೆ 3181 ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಮ ದತ್ತ, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ಭಾರತ್ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಹಾಸ್ಪಿಟಾಲಿಟಿ ಚೇರ್ಮನ್ ಅಶ್ರಫ್ ಎಸ್.ಕಮ್ಮಾಡಿ, ಹಿರಿಯ ಉದ್ಯಮಿ ವಲೇರಿಯನ್ ಡಾಯಸ್, ಪುತ್ತೂರು ಕೆನರಾ ಬ್ಯಾಂಕ್ ನ ಮುಖ್ಯ ಪ್ರಬಂಧಕ ಶ್ರೀರಾಮಪ್ಪ, ಚಾರ್ಟರ್ಡ್ ಅಕೌಂಟೆಂಟ್ ಸಿಎ ಅರವಿಂದ ಕೃಷ್ಣ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ, ಪುತ್ತೂರು ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಸತ್ಯಗಣೇಶ್, ಎಸಿಸಿಇಐ ಪುತ್ತೂರು ಚೇರ್ಮನ್ ಶಿವರಾಮ ಎಂ.ಎಸ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಚಂದ್ರಹಾಸ ರೈ ಬಿರವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಅಭಿಜ್ಞಾಪ್ರಹಾಸ್ ಶೆಟ್ಟಿ, ಶ್ರೀಮತಿ ಅಮಿತ ಎಸ್.ಶೆಟ್ಟಿ, ಸಂತೋಷ್ ಶೆಟ್ಟಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನ್ಮಾನ..
ಈ ಸಂದರ್ಭದಲ್ಲಿ ಹಿರಿಯ ಇಂಜಿನಿಯರ್ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ್ ಕುಮಾರ್, ಸೀನಿಯರ್ ಆರ್ಕಿಟೆಕ್ಟ್ ನಿರ್ಮಾಣ್ ಅಸೋಸಿಯೇಟ್ಸ್ ನ ಸಚ್ಚಿದಾನಂದ, ಬೆಳ್ತಂಗಡಿ ವೇಸ್ಟ್ ಕೋಸ್ಟ್ ಇದರ ಆರ್ಕಿಟೆಕ್ಟ್ ಬಿ.ಕೆ ಅನಿಕೇತ್ ಹೆಗ್ಡೆರವರನ್ನು ಸನ್ಮಾನಿಸಲಾಗುತ್ತದೆ.