ಕೊೖಲ ಕಲಾಯಿಗುತ್ತುವಿನಲ್ಲಿ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರ ಹುಟ್ಟುಹಬ್ಬದ ಸಂಭ್ರಮ- ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರ ಹುಟ್ಟುಹಬ್ಬದ ಸಂಭ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ನ.7ರಂದು ಸಂಜೆ ಕೊೖಲ ಕಲಾಯಿಗುತ್ತುವಿನಲ್ಲಿ ನಡೆಯಿತು.


ಮಕ್ಕಳ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕೇಶವ ಅಮೈ ಅವರ ಜೀವನ ಚರಿತ್ರೆಯನ್ನೊಳಗೊಂಡ ವಿಡಿಯೋ ಸಾಂಗ್ ಮತ್ತು ಇದಕ್ಕೆ ಪೂರಕವಾಗಿ ಕಲಾ ಶಿಕ್ಷಣ ಅಧ್ಯಾಪಕ ಲಕ್ಷ್ಮೀನಾರಾಯಣ ಅವರು ಸ್ಥಳದಲ್ಲೇ ಕೇಶವ ಅಮೈ ಅವರ ಭಾವಚಿತ್ರವನ್ನು ಬಿಡಿಸುವ ಮೂಲಕ ಮಾದರಿ ಕಾರ್ಯಕ್ರಮ ನಡೆಯಿತು.

ಕೇಶವ ಅಮೈ ಅವರು ತನ್ನ ಜೊತೆ ಹುಟ್ಟು ಹಬ್ಬದ ಸಂಭ್ರಮ ಆಚರಿಸುತ್ತಿರುವ ಸಹೋದರಿ ಶ್ರೀಲತಾ ಅವರ ಜೊತೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದರು. ಕೇಶವ ಅಮೈ ಅವರ ತಾಯಿ ಪುತ್ರನಿಗೆ ಕೇಕ್ ತಿನ್ನಿಸಿದರು.

ಈ ಸಂದರ್ಭ ಪತ್ನಿ ಮಾಲತಿ, ಪುತ್ರ ಗಗನ್, ಸಹೋದರ, ಸಹೋದರಿಯರು ಜೊತೆಯಲ್ಲಿದ್ದರು. ಬಳಿಕ ಅವರು ತನ್ನ ಜೀವನದ ಮಹತ್ವದ ತಿರುವು ಮತ್ತು ನಡೆದು ಬಂದ ಹಾದಿಯ ಕುರಿತು ವಿವರಿಸಿದರು. ಸ್ಪಂದನಾ ಸಮುದಾಯ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಆನೆಗುಂಡಿ, ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್, ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರು ಕಾರ್ಯಕ್ರಮ ನಿರೂಪಿಸಿದರು. ಎಸ್‌ಆರ್‌ಕೆ ಪರಿವಾರ, ಟೀಮ್ ಎಸ್‌ಆರ್‌ಕೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here