ಕಡಬ: ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಕಡಬ: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಶ್ರೀರಾಮ ಶಾಲೆ ಕಲ್ಲಡ್ಕ ಇಲ್ಲಿ ಸೆ.22ರಂದು ನಡೆದ ಪ್ರಾಂತೀಯ ಮತ್ತು ಕ್ಷೇತ್ರೀಯ (ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ) ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಮುಂದೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ವಿಜೇತ ತಂಡದ ವಿದ್ಯಾರ್ಥಿಗಳಾದ ಚೈತ್ರೇಶ್, ಹೇಮಂತ್, ಲಿಖಿತ್ ಕುಂಬಾರ, ಎನ್.ಕೆ ಯಶ್ವಿತ್, ಶೃಜನ್, ಗಗನ್ ಜೆ.ಕೆ, ಪೂರ್ಣೇಶ್, ನಿಶ್ವಿತ್ ಪುರಿಯ ಇವರನ್ನು ಕಡಬದ ಆದಿತ್ಯ ಪೆಟ್ರೋಲ್ ಪಂಪ್‌ನಲ್ಲಿ ಶಾಲು ಹಾಗೂ ಮಾಲೆಗಳನ್ನು ಹಾಕಿ, ತೆರೆದ ಪಿಕಪ್ ವಾಹನದಲ್ಲಿ ಕಡಬ ಪೇಟೆಯಿಂದಾಗಿ ಸಾಗಿ ಯೋಗಕ್ಷೇಮ ಕಟ್ಟಡದ ಎದುರುಗಡೆ ತಲುಪಿ ಅಲ್ಲಿ ವಿಜೇತರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿರುವ ಕೃಷ್ಣ ಶೆಟ್ಟಿ ಕಡಬ, ಸರಸ್ವತೀ ವಿದ್ಯಾಲಯದ ಸಂಚಾಲಕಿ ಸವಿತಾ ಶಿವಸುಬ್ರಮಣ್ಯ ಭಟ್, ಕೋಶಾಧಿಕಾರಿ ಲಿಂಗಪ್ಪ ಜೆ. ಆಡಳಿತ ಮಂಡಳಿ ಸದಸ್ಯರುಗಳಾದ ಸೀತಾರಾಮ ಗೌಡ ಎ, ಶಿವಪ್ರಸಾದ್ ಮೈಲೇರಿ, ಪುಲಸ್ತ್ಯ ರೈ, ಪ್ರಮೀಳಾ ಲೋಕೇಶ್, ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಸದಾಶಿವ ಭಟ್ ಸಂಚಾಲಕರಾದ ಅಜಿತ್ ರೈ ಆರ್ತಿಲ, ಕೋಶಾಧಿಕಾರಿ ಶರತ್ ಪಂಜೋಡಿ, ಭಾಗ್ಯಲಕ್ಷ್ಮಿ ಎಂಟರ್ ಪ್ರೈಸಸ್ ಮಾಲಕರಾದ ಸರಿತಾ ಮತ್ತು ರಾಧಾಕೃಷ್ಣ ಕೋಲ್ಪೆ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಮುಖ್ ಪ್ರಮೋದ್ ರೈ ನಂದುಗುರಿ, ಸಂಸ್ಥೆಯ ಸಿಬ್ಬಂದಿ ವರ್ಗ, ವಿಜೇತ ವಿದ್ಯಾರ್ಥಿಗಳ ಹೆತ್ತವರು ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದು ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿದರು.


ಕ್ರೀಡಾಪಟುಗಳಿಗೆ ನಮ್ಮ ಸಂಸ್ಥೆಯ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಶಿವಪ್ರಸಾದ್, ನಾಗೇಶ್ ಹಾಗೂ ಪ್ರೌಢ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ ತರಬೇತಿಯನ್ನು ನೀಡಿರುತ್ತಾರೆ. ಆಟಗಾರರಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಸಂಸ್ಥೆಯ ಪರವಾಗಿ ಅಭಿನಂದನೆಯನ್ನು ಅರ್ಪಿಸಲಾಯಿತು. ಪ್ರಾಥಮಿಕ ವಿಭಾಗದ ಮುಖ್ಯಗುರುಳಾದ ಮಾಧವ ಕೋಲ್ಪೆ ಸ್ವಾಗತಿಸಿ, ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್ ವಂದಿಸಿದರು.

LEAVE A REPLY

Please enter your comment!
Please enter your name here