ಕಡಬ: ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ನೂತನ ಸಮಿತಿ ರಚನೆ

0

ಕಡಬ: ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸಮಿತಿ ರಚನೆ ಸೆ.21 ರಂದು ಕಡಬದ ದುರ್ಗಾಂಬಿಕ ಅಮ್ಮನವರ ವಠಾರದಲ್ಲಿ ನಡೆಯಿತು.

ಶ್ರೀನಿವಾಸ ಕಲ್ಯಾಣೋತ್ಸವದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಈ ಧಾರ್ಮಿಕ ಕೆಲಸದಲ್ಲಿ ಹೆಚ್ಚು ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮತ್ತು ಆಮಂತ್ರಣ ಪತ್ರವನ್ನು ಪ್ರತಿ ಹಿಂದುವಿನ ಮನೆಗಳಿಗೂ ತಲುಪುವಂತೆ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದರು. ವಿಶ್ವ ಹಿಂದೂ ಪರಿಷತ್ ನ ನಿಕಟಪೂರ್ವ ಅಧ್ಯಕ್ಷರಾದ ಎ.ಜೆ ರಾವ್ ಶುಭ ಹಾರೈಸಿದರು. ಶ್ರೀನಿವಾಸ ಕಲ್ಯಾಣೋತ್ಸವದ ಕಡಬ ತಾಲೂಕು ಘಟಕವನ್ನು ಘೋಷಣೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ಕೆ.ಪ್ರಸಾದ ಕೆದಿಲಾಯ, ಗೌರವ ಸಲಹೆಗಾರರಾಗಿ ಗಣೇಶ್ ಭಟ್ ರವೀಂದ್ರ ದಾಸ್ ಪೂಂಜ ಅಧ್ಯಕ್ಷರಾಗಿ ಕಾಶಿನಾಥ್ ಗೋಗಟೆ ಉಪಾಧ್ಯಕ್ಷರಾಗಿ ಗಿರೀಶ್ ಕಡಬ ಪ್ರಧಾನ ಕಾರ್ಯದರ್ಶಿ,ಹಾಗೂ ಕಾರ್ಯದರ್ಶಿಗಳಾಗಿ ಹರೀಶ್ ನೆಕ್ಕಿಲಾಡಿ,ಸುರೇಶ್ ಕೋಟೆಗುಡ್ಡೆ, ಸೈಜು ಕೋಡಿಂಬಾಳ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪ್ರಮುಖರಾದ ಭಿಮಯ್ಯ ಭಟ್,ಪ್ರಾಣೇಶ್ ಕೆಮ್ಮಾಯಿ,ರವಿಕುಮಾರ್ ರೈ,ವೆಂಕಟರಮಣ ಕುತ್ಯಾಡಿ,,ರೂಪೇಶ್ ನಾಯ್ಕ್ ಹಾಗೂ ಪರಿವಾರ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here