ಕಡಬ: ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾಬಾರತಿ ಕರ್ನಾಟಕ ಇದರ ವತಿಯಿಂದ ಸೆ.20ರಂದು ಬೆಳಗಾವಿ ಜಿಲ್ಲೆಯ ದೇವೇಂದ್ರ ಜನ ಗೌಡ ಸ್ಕೂಲ್ ಸಿಂದೋಳಿಯಲ್ಲಿ ನಡೆದ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.
17ರ ವಯೋಮಾನದ ಬಾಲಕರ ರಿದಮಿಕ್ ವಿಭಾಗದಲ್ಲಿ ದಿಗಂತ್ 9ನೇ ತರಗತಿ ತೃತೀಯ ಸ್ಥಾನ, ಅಥ್ಲೆಟಿಕ್ ಯೋಗಾಸದಲ್ಲಿ ಜಿತೇಶ್ ಕೆ 10ನೇ ತರಗತಿ ತೃತೀಯ ಸ್ಥಾನ ಹಾಗೂ ಬಾಲಕಿಯರ ಟ್ರೆಡಿಶನಲ್ ಯೋಗಾಸನದಲ್ಲಿ ಇಂಚರ ಜಿ 10ನೇ ತರಗತಿ ದ್ವಿತೀಯ ಸ್ಥಾನ ಮತ್ತು 14ರ ವಯೋಮಾನದ ಬಾಲಕರ ಅಥ್ಲೆಟಿಕ್ ವಿಭಾಗದಲ್ಲಿ ಪೂಜನ್ ಡಿ ಆರ್, 8ನೇ ತರಗತಿ ದ್ವಿತೀಯ ಸ್ಥಾನ ಮತ್ತು ಬಾಲಕಿಯರ ಅಥ್ಲೆಟಿಕ್ ವಿಭಾಗದಲ್ಲಿ ಲಿಖಿತಾ 8ನೇ ತರಗತಿ, ದ್ವಿತೀಯ ಸ್ಥಾನ ಬಾಲಕಿಯರ ಗುಂಪು ಯೋಗಾಸನ ಸ್ಪರ್ಧೆಯಲ್ಲಿ ತೃಷಾ ಕೆ 6ನೇ ತರಗತಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಿ 9ನೇ ತರಗತಿ, ಕಿಶೋರವರ್ಗದ ಬಾಲಕಿಯರ ಗುಂಪು ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಮೃದನ್ ಎಸ್ ರೈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಇವರಿಗೆ ಸಂಸ್ಥೆಯ ಶಿಕ್ಷಕರುಗಳಾದ ಜಲಜಾಕ್ಷಿ ಬಿ ವಿ, ಗೀತಾ ಹಾಗೂ ಸರಸ್ವತೀ ಆಂಗ್ಲಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಕೆ ಎಸ್ ತರಬೇತಿ ನೀಡಿರುತ್ತಾರೆ.