ಮಹಿಳೆಯರು ಛಲದಿಂದ ಜೀವನದ ಸಮಸ್ಯೆ ಎದುರಿಸಬೇಕು-ಶಕುಂತಳಾ ಶೆಟ್ಟಿ
ಪುತ್ತೂರು: ಸಂತ ಫಿಲೋಮಿನಾ ಪದವಿ ಸ್ವಾಯತ್ತ ಕಾಲೇಜಿನ ವಿಮೆನ್ ಎಂಪವರ್ಂಟ್ ಸೆಲ್ ಮತ್ತು ಆಂಟಿ ವಿಮೆನ್ ಹರಾಸ್ಮೆಂಟ್ ಸೆಲ್ ಇದರ ಜಂಟಿ ಆಶ್ರಯದಲ್ಲಿ ‘ಎಂಪವರ್ ವಿಮೆನ್, ಟ್ರಾನ್ಸಾಫಾರ್ಮ್ ಲೈವ್ಸ್’ ಕಾರ್ಯಕ್ರಮ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮಾತನಾಡಿ ಮಹಿಳೆಯರು ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಛಲವನ್ನು ಹೊಂದಿಕೊಂಡಿರಬೇಕು. ಸಮಾಜದಲ್ಲಿ ಮಹಿಳೆಯರು ಎದ್ದು ನಿಲ್ಲಬೇಕು, ವೀರರಾಣಿ ಒನಕೆ ಓಬವ್ವನಂತೆ ಶತ್ರುಗಳ ಜೊತೆ ಹೋರಾಡಬೇಕು. ಯಾರಿಗೂ ಹೆದರದೆ ತಮ್ಮ ವಿಚಾರಗಳನ್ನು ಮುಂದಿಡಬೇಕು. ಸೋಮಾರಿತನವನ್ನು ಬಿಟ್ಟು ಜೀವನದಲ್ಲಿ ಮುನ್ನುಗ್ಗಬೇಕು. ನಿಮ್ಮ ಕಲಿಯುವಿಕೆಯನ್ನು ಚೆನ್ನಾಗಿ ಮುಂದುವರಿಸಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ ನಿಮ್ಮ ಶಕ್ತಿಯನ್ನು ನಿಮ್ಮ ಮಾತು ಮತ್ತು ಕಾರ್ಯಗಳಲ್ಲಿ ಪ್ರದರ್ಶಿಸಿ ನಿಮ್ಮ ಜೀವನಕ್ಕಾಗಿ ನೀವೇ ಗಳಿಸಿ. ಮಹಿಳೆಯರು ಶ್ರಮಜೀವಿಗಳಾಗಿರಬೇಕು. ಕೆಲಸ ಮತ್ತು ಸ್ವಚ್ಛತೆಯ ಬಗ್ಗೆ ಬದ್ಧತೆಯನ್ನು ಹೊಂದಿರಬೇಕು. ಸಮಾಜದಲ್ಲಿ ಮಹಿಳೆಯರಿಗೆ ಅನೇಕ ಅವಕಾಶಗಳಿವೆ. ನಿಮ್ಮಲ್ಲಿರುವ ಶಕ್ತಿ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿ ಎಂದು ಹೇಳಿದರು.
ವಿಮೆನ್ ಎಂಪವರ್ಮೆಂಟ್ ಸೆಲ್ ಸಂಯೋಜಕಿ ಪ್ರೇಮಲತಾ ಕೆ. ಮತ್ತು ಆಂಟಿ ವಿಮೆನ್ ಹರಾಸ್ಮೆಂಟ್ ಸೆಲ್ ಸಂಯೋಜಕಿ ನೋವ್ಲಿನ್ ಎನ್. ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಆರ್ಒ ಭಾರತಿ ಎಸ್. ರೈ, ಕಾಲೇಜಿನ ಮಹಿಳಾ ಉಪನ್ಯಾಸಕಿಯರು ಮತ್ತು ಮಹಿಳಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ತ್ರಿತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ಅಖಿಲ ಮತ್ತು ನವ್ಯ ಪ್ರಾರ್ಥಿಸಿದ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಲಾನಿಷಾ ಡಿಸೋಜಾ ಸ್ವಾಗತಿಸಿದರು. ರಿಯಾ ವಂದಿಸಿ ವಿದ್ಯಾರ್ಥಿನಿ ಅಪೂರ್ವ ಡಿ. ಕಾರ್ಯಕ್ರಮ ನಿರೂಪಿಸಿದರು.