ಪುತ್ತೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಓಮ್ನಿ ಕಾರು ಡಿಕ್ಕಿಯಾದ ಘಟನೆ ನರಿಮೊಗರು ಸಮೀಪ ನಡೆದಿದೆ.
ಪಾಪೆತ್ತಡ್ಕ ನಿವಾಸಿ, ಪುರುಷೋತ್ತಮ ಆಚಾರ್ಯ ಎಂಬವರ ಪುತ್ರಿ, ರಾಮಕೃಷ್ಣ ಶಾಲಾ 9ನೇ ತರಗತಿ ವಿದ್ಯಾರ್ಥಿನಿ ವರ್ಷ ಗಾಯಗೊಂಡ ಬಾಲಕಿ.
ಘಟನೆಯಲ್ಲಿ ವಿದ್ಯಾರ್ಥಿನಿಯ ಕಾಲಿಗೆ ಗಂಭೀರ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.