ಪುತ್ತೂರು ‘ಸ್ವಚ್ಛತಾ ಹೀ ಸೇವಾ 2025’ ಸಪ್ತಾಹದ ಅಂಗವಾಗಿ ಪುತ್ತೂರು ಸಮುದಾಯ ಪ್ರೇರಕರು ಹಾಗೂ ಸಾಹಸ ಸಂಸ್ಧೆ ವತಿಯಿಂದ ಕೊಡಿಪ್ಪಾಡಿ ಸುದಾನ ಶಾಲೆಯ ಎದುರಿನ ಬಸ್ ನಿಲ್ದಾಣ ಪ್ರದೇಶವನ್ನು ಸ್ವಚ್ಛಗೊಳಿಸಿದರು.
ನಗರಸಭೆ ಪುತ್ತೂರು, ಸಾಹಸ ಸಂಸ್ಥೆ ಬೆಂಗಳೂರು ಇವರು HDB Financial Service ಇವರ ಆರ್ಥಿಕ ನೆರವಿನೊಂದಿಗೆ ಪುತ್ತೂರು ನಗರಸಭಾ ಅಧ್ಯಕ್ಷರು ಮತ್ತು ಪೌರಾಯುಕ್ತರ ಮಾರ್ಗದರ್ಶನದಂತೆ ಸ್ವಚ್ಚತಾ ಕಾರ್ಯ ನಡೆದಿದೆ. ಪುತ್ತೂರು ನಗರಸಭೆಯ ಮೇಲ್ವಿಚಾರಕ, ಸಮುದಾಯ ಪ್ರೇರಕ ಐತಪ್ಪ, ಸಾಹಸ ಸಂಸ್ಥೆಯ ಯೋಜನಾ ಸಂಯೋಜಕ ಅನಂತ ದೇಶಭಂಡಾರಿ, ಮೇಲ್ವಿಚಾರಕ ಗಣೇಶ ಹಾಗೂ ಸಿದ್ದಪ್ಪ ವಡೆರ್ ಹಾಗೂ ಆಟೋ ಚಾಲಕರು ಸ್ವಚ್ಚತಾ ಕಾರ್ಯಕ್ಕೆ ಸಾಥ್ ನೀಡಿದರು.