ಆಲಂಕಾರು:ಬುಡೇರಿಯಾ ಉಳ್ಳಾಲ್ತಿ ಉಳ್ಳಾಕ್ಲು ಕ್ಷೇತ್ರದಲ್ಲಿ ಸೆ.26 ರಂದು ನವರಾತ್ರಿ ಪೂಜೆ ಬೆಳಿಗ್ಗೆ 9:00 ರಿಂದ ನಡೆಯಿತು.ಬೆಳಿಗ್ಗೆ ನಾಗದೇವರಿಗೆ ನಾಗತಂಬಿಲ ನಡೆದು
ದೈವದ ಭಂಡಾರದ ಸ್ಥಾನದಿಂದ ದೈವಗಳ ಭಂಡಾರವನ್ನು ತೆಗೆದು ಉಳ್ಳಾಲ್ತಿ, ಉಳ್ಳಾಕ್ಲು, ರುದ್ರಚಾಮುಂಡಿ,ಅಣ್ಣಪ್ಪ,ವಾರಾಹಿ,ದಂಡನಾಯಕ ಕಲ್ಕುಡ ,ಮತ್ತು ಗುಳಿಗ ದೈವಗಳ ಗುಡಿಗಳಲ್ಲಿ ಇಟ್ಟು ಪ್ರಾರ್ಥನೆಯೊಂದಿಗೆ,ವಿಶೇಷ ಸೇವೆಗಳಾದ ಸರ್ವಸೇವೆ,ಹೂವಿನ ಪೂಜೆ,ಕುಂಕುಮರ್ಚನೆ,ಪಂಚಕಜ್ಜಾಯ ಮತ್ತು ಭಕ್ತಾದಿಗಳ ವಾಹನ ಪೂಜೆ ನಡೆಸಲಾಯಿತು.

ನಂತರ ಆಯಾಯ ದೈವಗಳ ಗುಡಿಯಿಂದ ಭಂಡಾರವನ್ನು ತೆಗೆದು ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆಯೊಂದಿಗೆ ಮೂಲ ಭಂಡಾರಸ್ಥಾನದಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು. ಅಗಮಿಸಿದ ಭಕ್ತಾದಿಗಳು ನವರಾತ್ರಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಪಾಲ್ಗೊಂಡರು,ಈ ಸಂಧರ್ಭದಲ್ಲಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ,ಸಂಕಪ್ಪ ಗೌಡ ಗೌಡತ್ತಿಗೆ,ಸೂರಪ್ಪ ಪೂಜಾರಿ ಹೊಸಮಜಲು,ಆರ್ಚಕರಾದ ಅನಂತರಾಮ ಭಟ್ ತೋಟಂತಿಲ,ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.