ಸೆ.29:ಎ.ವಿ.ಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲೋಕಾರ್ಪಣೆ

0

ಪುತ್ತೂರು: ಎ.ವಿ.ಜಿ ಅಸೋಸಿಯೇಟ್ಸ್, ಎ.ವಿ.ಜಿ. ಕನ್ಸಕ್ಷನ್ಸ್, ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್‌ಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿ ಮುನ್ನಡೆಸುತ್ತಿರುವ ಆಡಳಿತ ಮಂಡಳಿಯಿಂದ ಸಹಕಾರಿ ಕ್ಷೇತ್ರಕ್ಕೊಂದು ಕೊಡುಗೆಯಾಗಿ ಇದೀಗ ದ.ಕ. ಜಿಲ್ಲಾ ಮಟ್ಟದ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಲಿ. ದ.ಕ. ಎಂಬ ಸಂಸ್ಥೆಯು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಸೆ.29 ರಂದು ಲೋಕಾರ್ಪಣೆಗೊಳ್ಳುತ್ತಿದೆ.


ಪತ್ರಿಕಾಗೋಷ್ಟಿಯಲ್ಲಿ ಸೊಸೈಟಿಯ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಕಳುವಾಜೆ ಮಾತನಾಡಿ, ತನ್ನ ನೂತನ ಸಹಕಾರಿ ಸಂಸ್ಥೆಯನ್ನು ‘ಸುಭದ್ರ ಭಾರತಕ್ಕಾಗಿ ಸಮರ್ಥ ಸಹಕಾರಿ ಸಂಸ್ಥೆ’ ಎಂಬ ನಂಬಿಕೆಯೊಂದಿಗೆ ಲೋಕಾರ್ಪಣೆ ಮಾಡುತ್ತಿದೆ. ಅಂದು ಬೆಳಗ್ಗೆಯ ಸೊಸೈಟಿಯ ಕಚೇರಿ ಕಟ್ಟಡದಲ್ಲಿ ಪೂರ್ವಾಹ್ನ ಗಂಟೆ 6.00ಕ್ಕೆ ಗಣಹೋಮದ ಮೂಲಕ ದೇವತಾ ಪ್ರಾರ್ಥನೆಯೊಂದಿಗೆ ಲೋಕಾರ್ಪಣ ಕಾರ್ಯವು ಚಾಲನೆ ಪಡೆಯಲಿದೆ. ಬಳಿಕ ಪೂರ್ವಾಹ್ನ ಗಂಟೆ 9.30ಕ್ಕೆ ಕಚೇರಿಯ ಉದ್ಘಾಟನೆ ಕಾರ್ಯಗಳು ನಡೆಯಲಿದ್ದು, ಬೆಂಗಳೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಅವರು ಕಚೇರಿಯ ಉದ್ಘಾಟನೆ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭದ್ರತಾ ಕೋಶದ ಉದ್ಘಾಟನೆ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಅವರು ಗಣಕಯಂತ್ರದ ಉದ್ಘಾಟನೆ ಮತ್ತು ಮಂಗಳೂರಿನ ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಭಾಸ್ಕರ ದೇವಸ್ಯ ಅವರು ಅಧ್ಯಕ್ಷರ ಕೊಠಡಿಯ ಉದ್ಘಾಟನೆಗಳನ್ನು ನೆರವೇರಿಸಲಿದ್ದಾರೆ.

ಬಳಿಕ ಪೂರ್ವಾಹ್ನ ಗಂಟೆ 9.30ರಿಂದ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಸೊಸೈಟಿಯ ಸಭಾ ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ದೀಪ ಪ್ರಜ್ವಲಿಸಲಿದ್ದಾರೆ. ಪುತ್ತೂರು ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಪ್ರಥಮ ಸಾಲ ಪತ್ರ ವಿತರಣೆ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್. ಅವರು ಪ್ರಥಮ ಠೇವಣಿ ಪತ್ರ ವಿತರಣೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ಟರು ಸಂಸ್ಥೆಯ ಚಿಹ್ನೆಯ ಅನಾವರಣ ಕಾರ್ಯಗಳನ್ನು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಯಾಗಳಾಗಿ ರಾಜ್ಯ ಸೌಹಾರ್ದ ಸಹಕಾರ ಇದರ ನಿರ್ದೇಶಕಿ ಭಾರತಿ ಜಿ. ಭಟ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರು ಭಾಗವಹಿಸಲಿದ್ದಾರೆ.

ಲೋಕಾರ್ಪಣ ಬಾಬ್ತು ವಿಶೇಷ ಬಡ್ಡಿ ಯೋಜ‌ನೆಯಾಗಿ 2025ರ ವರ್ಷಾಂತ್ಯದೊಳಗೆ ಇರಿಸಲಾಗುವ ಎಲ್ಲಾ ಠೇವಣಿಗಳಿಗೆ ಶೇ.0.25 ಅಧಿಕ ಬಡ್ಡಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಉಮೇಶ ಮಳುವೇಲು, ನಿರ್ದೇಶಕಾರದ ಎ ವಿ ನಾರಾಯಣ, ಸೀತಾರಾಮ ಕೇವಳ, ಗುಡ್ಡಪ್ಪ ಗೌಡ ಬಲ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ನಿರ್ದೇಶಕಿ ಪ್ರತಿಭಾದೇವಿ ಉಪಸ್ಥಿತರಿದ್ದರು.

ಎ.ವಿ.ಜಿ.ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಿಶೇಷತೆ:
ಪುತ್ತೂರಿನ ರೈಲ್ವೇ ನಿಲ್ದಾಣ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಿಂದ ಕೇವಲ 300 ಮೀ. ಮತ್ತು ಸರಕಾರಿ ಬಸ್ ನಿಲ್ದಾಣದಿಂದ ಕೇವಲ 200 ಮೀ. ದೂರದಲ್ಲಿ ಖಾಸಗಿ ಬಸ್ ನಿಲ್ದಾಣದ ಎದುರು ತಲೆಯೆತ್ತುತ್ತಿರುವ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ದೇಶ ಕಾಯುವ ಯೋಧರ ಠೇವಣಿಗಳ ಮೇಲೆ 0.50%, ಮಹಿಳೆಯರಿಗೆ 0.25%, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ 0.50% ಅಧಿಕ ಬಡ್ಡಿಯನ್ನು ನೀಡಲಿದೆ. 99 ತಿಂಗಳುಗಳಲ್ಲಿ ದ್ವಿಗುಣಗೊಳ್ಳುವ ಎವಿಜಿ ಕ್ಯಾಶ್ ಸರ್ಟಿಫಿಕೇಟ್‌ನ ಜೊತೆಗೆ ಆರ್.ಡಿ. ಠೇವಣಿ ಮತ್ತು ನಿರಖು ಠೇವಣಿಗಳ ಮೇಲೆ ಆಕರ್ಷಕ ಬಡ್ಡಿಯನ್ನು ನೀಡಲಿದೆ. ಇತರ ವಿವಿಧ ಸಾಲ ಸೌಲಭ್ಯಗಳೂ ಲಭ್ಯವಿರಲಿವೆ.
ಕಳುವಾಜೆ ವೆಂಕಟ್ರಮಣ ಗೌಡ

LEAVE A REPLY

Please enter your comment!
Please enter your name here