ಬಡಗನ್ನೂರು: ಈಶ ಗ್ರಾಮೋತ್ಸವದ ವತಿಯಿಂದ ನಡೆದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ವಿಜೇತರಾದ ಬಡಗನ್ನೂರು ಗ್ರಾಮದ ಪಡುಮಲೆ ಶಾಸ್ತಾರ ಮಹಿಳಾ ತಂಡದ ಸ್ಪರ್ಧಾಳುಗಳಿಗೆ ಸನ್ಮಾನ ಸಮಾರಂಭ ಹಾಗೂ ಬೃಹತ್ ವಾಹನ ಜಾಥಾ (ಕೌಡಿಚ್ಚಾರಿನಿಂದ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಆವರಣದವರೆಗೆ) ಕಾರ್ಯಕ್ರಮವು ಅ.2ರಂದು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಾಲಿಬಾಲ್ ತಂಡ ಮಾಜಿ ಕಪ್ತಾನರಾದ ಗಣೇಶ್ ರೈ ಮುಂಡಾಸು ಭಾಗವಹಿಸಲಿದ್ದಾರೆ. ಅಭ್ಯಾಗತರುಗಳಾಗಿ ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ಎಂ, ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸದಸ್ಯ ಗಣರಾಜ ಕುಂಬ್ಳೆ, ಉಪಸ್ಥಿತರಾಗಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಶ್ವೇಶ್ ಹಿರಣ್ಯ, ಪ್ರತಿಭಾ ಪ್ರೌಢ ಶಾಲಾ ಮುಖ್ಯ ಗುರು ಸುಮನಾ ಬಿ. ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ರಾಜಗೋಪಾಲ ಎನ್.ಭಾಗವಹಿಸಲಿದ್ದಾರೆ.
ಸನ್ಮಾನ
ಪಡುಮಲೆ ಶಾಸ್ತಾರ ಮಹಿಳಾ ತಂಡದ ಸದಸ್ಯರುಗಳಾದ ದೀಕ್ಷಾ ರೈ ಎ, ಪ್ರಿಯ ಬಿ, ಸಾಕ್ಷಿ ರೈ ಎ, ಶ್ವೇತಾ ಎಸ್. ರೈ, ರೇಖಾ ರೈ ಪಿ.ಎಸ್, ರಮಾಕಾಂತಿ ರೈ ಬಿ. ಹೇಮಾವತಿ ಸಿ.ಎಚ್, ಆಶಾಲತಾ ಕೆ ಮತ್ತು ತರಬೇತುದಾರರಾದ ಮೋನಪ್ಪ ಎಂ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬೃಹತ್ ವಾಹನ ಜಾಥಾ
ಬೃಹತ್ ವಾಹನ ಜಾಥಾ ಮೆರವಣಿಗೆ ಕೌಡಿಚ್ಚಾರ್ ಜಂಕ್ಷನ್ ನಲ್ಲಿ ಬೆಳಗ್ಗೆ ಗಂ 9:30ಕ್ಕೆ ಆರಂಭಗೊಂಡು ಕೌಡಿಚ್ಚಾರಿನಿಂದ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಆವರಣದವರೆಗೆ ಹಾದು ಬರಲಿದೆ ಬಳಿಕ 11:30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.