ಪುತ್ತೂರು: ಅಲ್ ಇಹ್ಸಾನ್ ಯೂತ್ ಕೌನ್ಸಿಲ್ ಮಾಂತೂರು ಮತ್ತು ಬದ್ರಿಯಾ ಮಸೀದಿ ಮಾಂತೂರು ಇದರ ವತಿಯಿಂದ ಮೌಲೀದ್ ಮಜ್ಲಿಸ್ ನಡೆಯಿತು. ಸವಣೂರು ಚಾಪಲ್ಲ ಸವಣೂರು ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ನೇತೃತ್ವ ವಹಿಸಿ ದುವಾ ನೆರವೇರಿಸಿದರು. ನಂತರ ಸಮಿತಿಯ 26ನೇ ವಾರ್ಷಿಕ ಮಹಾಸಭೆ ಮಾಂತೂರು ಬದ್ರಿಯಾ ಮಸೀದಿ ವಠಾರದಲ್ಲಿ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ರಝಾಕ್ ಕೆನರಾರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾಂತೂರು ಬದ್ರಿಯಾ ಮಸೀದಿಯ ಉಸ್ತಾದ್ ತಾಜುದ್ದೀನ್ ಅಝ್ಅರಿ ದುವಾ ನೆರವೇರಿಸಿದರು. ೨೦೨೫-೨೬ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಶೀರ್ ಕೆನರಾ, ಉಪಾಧ್ಯಕ್ಷರಾಗಿ ಹಮೀದ್ ಸೋಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಮಾಂತೂರು, ಜೊತೆ ಕಾರ್ಯದರ್ಶಿಯಾಗಿ ಸಲೀಂ ಯು.ಎಸ್ ಮತ್ತು ಫಾರೂಕ್ ಬಸ್ತಿಮೂಲೆ, ಕೋಶಾಧಿಕಾರಿಯಾಗಿ ಅಝೀಝ್ ಕುರ್ತಲ ,ಸಂಘಟನಾ ಕಾರ್ಯದರ್ಶಿಯಾಗಿ ನಜೀರ್ ಮುಂಡತ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಝಕಾರಿಯ ಎಂ, ರಫೀಕ್ ಎಂ.ಎ, ಇಕ್ಬಾಲ್ ಕೆನರಾ, ಎಂ.ಎಸ್ ರಫೀಕ್, ಹನೀಫ್ ಎ, ರಫೀಕ್ ಸೋಂಪಾಡಿ, ಸಮೀರ್ ಎ, ನಝೀರ್ ಎಂ, ಕಾಸಿಂ ಎಂ, ಕಲೀಲ್ ಎಂ, ಸಂಶುದ್ದೀನ್ ಎಂ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಅಬ್ದುಲ್ ಖಾದರ್ ಹಾಜಿ ಸಹಲ್ ಮತ್ತು ಉಮ್ಮರ್ ಸೋಂಪಾಡಿರವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಚಾಪಲ್ಲ ಜಮಾಅತ್ ಸಮಿತಿಯ ಮಾಜಿ ಜೊತೆ ಕಾರ್ಯದರ್ಶಿ ಮುಹಮ್ಮದ್ ಕುರ್ತಲ, ಹಿರಿಯರಾದ ಅಬೂಬಕ್ಕರ್ ಹಾಜಿ ಆರ್ಥಿಕೆರೆ, ಅಧ್ಯಕ್ಷ ಎಂ ಎ.ರಫೀಕ್ ಉಪಸ್ಥಿತರಿದ್ದರು. 2024-25ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯದರ್ಶಿ ಅಝೀಝ್ ಕುರ್ತಲ ಮಂಡಿಸಿದರು. ಎಂ.ಎಸ್ ರಫೀಕ್ ಸ್ವಾಗತಿಸಿ ವಂದಿಸಿದರು.