ಪುತ್ತೂರು ಸರಕಾರಿ ಆಸ್ಪತ್ರೆಗೆ ರೂ.1ಲಕ್ಷ ಮೌಲ್ಯದ 150ಲೀ.ಸಾಮರ್ಥ್ಯದ ವಾಟರ್ ಫಿಲ್ಟರ್ ಕೊಡುಗೆ
ಪುತ್ತೂರು: ನೆಹರುನಗರ ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ರೆ.ವಿಜಯಹಾರ್ವಿನ್ ರವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರಗೆ ಶುದ್ಧೀಕರಿಸಿ ಕುಡಿಯುವ ನೀರಿನ ವ್ಯವಸ್ಥೆಗೆ ಸುಮಾರು 1ಲಕ್ಷ ರೂ. ಮೌಲ್ಯ ವೆಚ್ಚದ 150 ಲೀಟರ್ ಸಾಮರ್ಥ್ಯದ ವಾಟರ್ ಫಿಲ್ಟರ್ ಅನ್ನು ಶನಿವಾರ ಕೊಡುಗೆಯಾಗಿ ನೀಡಲಾಯಿತು.
ಸುದಾನ ಸಮೂಹ ಸಂಸ್ಥೆಗಳು, ರೋಟರಿ ಕ್ಲಬ್ ಪುತ್ತೂರು ಎಲೈಟ್ ಹಾಗೂ ರೆ|ವಿಜಯ ಹಾರ್ವಿನ್ ರವರ ಅಭಿಮಾನಿಗಳ ನೆರವಿನಿಂದ ನೀಡಲಾದ ಫಿಲ್ಟರ್ ಅನ್ನು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ ಅವರಿಗೆ, ರೆ.ವಿಜಯ ಹಾರ್ವಿನ್ ಅವರು ಹಸ್ತಾಂತರಿಸಿದರು. ಇದೇ ವೇಳೆ ಕೃತಜ್ಞತೆ ಸಲ್ಲಿಸಿದ ಡಾ.ಯದುರಾಜ್ ಅವರು, ಆಸ್ಪತ್ರೆಯ ಅತೀ ಅಗತ್ಯತೆ ಅರಿತು ನೀಡಲಾದ ವಾಟರ್ ಫಿಲ್ಟರ್ ಹೆಚ್ಚು ಜನರಿಗೆ ಸದುಪಯೋಗವಾಗಲಿ ಎಂದರು.
ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಆಸ್ಕರ್ ಆನಂದ್, ಸಿದ್ದಿಕ್ ಸುಲ್ತಾನ್, ಸುದಾನ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶೋಭಾ ನಾಗರಾಜ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿ, ಪ್ರಮುಖರಾದ ವಿಕ್ಟರ್ ಮಾರ್ಟಿಸ್, ರೋಟರಿ ಎಲೈಟ್ ಕಾರ್ಯದರ್ಶಿ ಪದ್ಮಾವತಿ, ಸದಸ್ಯರಾದ ಅಬ್ದುಲ್ ರಝಾಕ್ ಕಬಕಕಾರ್ಸ್, ನವೀನ್ ಹನ್ಸ್, ಲವೀನಾ ಹನ್ಸ್, ಸ್ವೀಡಲ್, ಬಾಲು ಸುದಾನ , ಸಲ್ಮಾನ್ ಪಾರಿಷ್, ಪ್ರಮುಖರಾದ ಪ್ರವೀಣ್ ಮುಂಡೂರು, ಸಲಾಂ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು. ಆಸ್ಪತ್ರೆ ಸಿಬ್ಬಂದಿ ಹುಕ್ರಪ್ಪ, ಇಲೆಕ್ಟ್ರಿಶನ್ ಶರತ್, ಸುಧಾಕರ್ ಕಾವೇರಿ, ಲಿಖಿತ್ ಮೆಗಾ ಸಹಕರಿಸಿದರು. ಪತ್ರಕರ್ತ ರೋಟರಿ ಎಲೈಟ್ ಸದಸ್ಯ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.