ದಾರುಲ್ ಹಸನಿಯಾ ಅಕಾಡೆಮಿ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮ ‘ನಸೀಮು ತಹ್ಯಾ‘ಗೆ ಚಾಲನೆ

0

ಪುತ್ತೂರು : ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿ ಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮ ‘ನಸೀಮು ತಹ್ಯಾ’ ಗೆ ಸಾಲ್ಮರ ಎಜು ಗಾರ್ಡನ್ ನಲ್ಲಿ ಚಾಲನೆ ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಯ್ಯಿದ್ ಯಹ್ಯಾ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.


ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ‌.ಅಹ್ಮದ್ ಹಾಜಿ ಆಕರ್ಷಣ್ ಅವರು ಕಾರ್ಯಕ್ರಮ ವನ್ನು ಉದ್ಗಾಟಿಸಿ ಶಿಕ್ಷಣವು ಮಕ್ಕಳಲ್ಲಿ ಜ್ಞಾನ ,ಸಾಂಸ್ಕೃತಿಕ ಅರಿವು ಮತ್ತು ಸಮಾಜಮುಖಿ ವ್ಯಕ್ತಿತ್ವ ವನ್ನು ರೂಪಿಸುತ್ತದೆ ಈ ನಿಟ್ಟಿನಲ್ಲಿ ದಾರುಲ್ ಹಸನಿಯಾ ಅಕಾಡೆಮಿ ಯು ಪ್ರತಿಭಾವಂತ ರನ್ನು ಸೃಷ್ಟಿ ಮಾಡುವಂತಾಗಲಿ ಎಂದು ಹೇಳಿದರು‌.
ಸಮಾರಂಭದಲ್ಲಿ ಇರ್ಶಾದ್ ದಾರಿಮಿ ಮುಕ್ವೆ,ಅಬ್ಬಾಸ್ ಮದನಿ ಗಟ್ಟಮನೆ, ಪುರಸಭಾ ಸದಸ್ಯ ರಿಯಾಝ್ ಇಂಜಿನಿಯರಿಂಗ್ ವಳತ್ತಡ್ಕ, ಕೂರ್ನಡ್ಕ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಬೂಬಕ್ಕರ್ ಮುಲಾರ್ ಮೊದಲಾದವರು ಶುಭ ಹಾರೈಸಿದರು‌.


ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಟ್ರಸ್ಟಿಗಳಾದ ಅಬ್ದುರ್ರಹ್ಮಾನ್ ಹಾಜಿ ಬಾಳಾಯ, ಅಬ್ದುಲ್ ರಹಿಮಾನ್ ಅರ್.ಟಿ.ಒ., ಶರೀಫ್ ಹಾಜಿ ನೇರಳಕಟ್ಟೆ ,ವಿವಿಧ ಸಂಘಸಂಸ್ಥೆಗಳ ನಾಯಕರಾದ ಇಸ್ಮಾಯಿಲ್ ಸಾಲ್ಮರ,ಉಮರ್ ಸಂಪ್ಯ, ಯು.ಪಿ.ಅಬ್ಬಾಸ್ ಹಾಜಿ, ಸಯ್ಯಿದ್ ಹಸನ್ ತಂಙಳ್ ಸಾಲ್ಮರ,ಅಯಾನ್ ಪರ್ಲಡ್ಕ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಶಾಫಿ ಮದನಿ ಪುತ್ತೂರು,ಹಾಫಿಝ್ ಸಲ್ಮಾನುಲ್ ಫಾರಿಸ್, ಇಸ್ಮಾಯಿಲ್ ಅನ್ಸಾರಿ, ಹಾಫಿಝ್ ಮಹರೂಫ್, ಅಬ್ದುಲ್ ಲತೀಫ್ ಕೊಡಿಪ್ಪಾಡಿ, ಸಾದಿಕ್ ಬನ್ನೂರು, ಮಹಬೂಬ್ ಹಾಜಿ, ಪುತ್ತಬ್ಬ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ‘ಸಮಸ್ತ’ ದ ಶತಮಾನೋತ್ಸವದ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.


ಕೆ.ಎಂ‌.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಸಿದರು.ಮ್ಯಾನೇಜರ್ ಅಬ್ದುಲ್ ಕರೀಂ ದಾರಿಮಿ ವಂದಿಸಿದರು‌‌.ಸಂಸ್ಥೆಯ ಸಂಯೋಜಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here