14ರ ವಯೋಮಾನ ಬಾಲಕರ ವಿಭಾಗ-ಮಂಡ್ಯ, ಬಾಲಕಿಯರ ವಿಭಾಗ-ದ.ಕ. ತಂಡ ಚಾಂಪಿಯನ್
17ರ ವಯೋಮಾನ ಬಾಲಕರ ವಿಭಾಗ-ಚಿಕ್ಕಮಗಳೂರು, ಬಾಲಕಿಯರ ವಿಭಾಗ-ದ.ಕ. ತಂಡ ಚಾಂಪಿಯನ್
ರಾಮಕುಂಜ: ದ.ಕ.ಜಿಲ್ಲಾಡಳಿತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವರ ಸಹಯೋಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆ ಆಶ್ರಯದಲ್ಲಿ ಎರಡು ದಿನ ನಡೆದ ಮೈಸೂರು ವಿಭಾಗ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸೆ.28ರಂದು ಸಂಜೆ ನಡೆಯಿತು.

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಮಂಡ್ಯ, ಬಾಲಕಿಯರ ವಿಭಾಗದಲ್ಲಿ ದ.ಕ. ಹಾಗೂ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಚಿಕ್ಕಮಗಳೂರು, ಬಾಲಕಿಯರ ವಿಭಾಗದಲ್ಲಿ ದ.ಕ.ಜಿಲ್ಲಾ ತಂಡ ಚಾಂಪಿಯನ್ ಆಗಿದ್ದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿವೆ.
ವಿಜೇತರ ವಿವರ ಇಂತಿದೆ;
14 ವರ್ಷದ ಬಾಲಕರ ವಿಭಾಗದಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದ.ಕ.ಜಿಲ್ಲಾ ತಂಡದ ತೀರ್ಥೇಶ್ (ಉತ್ತಮ ದಾಳಿಗಾರ), ಮಂಡ್ಯ ಜಿಲ್ಲಾ ತಂಡದ ಮಹೇಶ್ (ಉತ್ತಮ ಹಿಡಿತಗಾರ) ಹಾಗೂ ಯಶವಂತ (ಸರ್ವೋತ್ತಮ ಆಟಗಾರ) ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
14 ವರ್ಷದ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲಾ ತಂಡದ ಪ್ರಾಪ್ತಿ ಎಂ.(ಉತ್ತಮ ದಾಳಿಗಾರ್ತಿ), ದ.ಕ.ಜಿಲ್ಲಾ ತಂಡದ ಸನ್ನಿಧಿ (ಉತ್ತಮ ಹಿಡಿತಗಾರ್ತಿ) ಹಾಗೂ ಜುಯಾನ್ನ ಕುಟಿನ್ಹಾ(ಸರ್ವೋತ್ತಮ ಆಟಗಾರ್ತಿ) ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
17 ವರ್ಷ ಬಾಲಕರ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲಾ ತಂಡ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ದ.ಕ.ಜಿಲ್ಲಾ ತಂಡದ ಅಭಿಷೇಕ್ (ಉತ್ತಮ ದಾಳಿಗಾರ), ಚಿಕ್ಕಮಗಳೂರು ಜಿಲ್ಲಾ ತಂಡದ ದರ್ಶನ್ ಲಕ್ಷಣ್ ಪಡಸಲಗಿ (ಉತ್ತಮ ಹಿಡಿತಗಾರ) ಹಾಗೂ ಲಾಲ ಉಸ್ಮಾನ್ (ಸರ್ವೋತ್ತಮ ಆಟಗಾರ) ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
17 ವರ್ಷ ಬಾಲಕಿಯರ ವಿಭಾಗದಲ್ಲಿ ಅತಿಥೇಯ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿಯರ ದಕ್ಷಿಣ ಕನ್ನಡ ಜಿಲ್ಲಾ ತಂಡ ಪ್ರಥಮ ಹಾಗೂ ಉಡುಪಿ ಜಿಲ್ಲಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದ.ಕ.ಜಿಲ್ಲಾ ತಂಡದ ರಮ್ಯ ರಾಮಕುಂಜ (ಉತ್ತಮ ದಾಳಿಗಾರ್ತಿ), ಧನ್ವಿ ರಾಮಕುಂಜ (ಸರ್ವೋತ್ತಮ ಆಟಗಾರ್ತಿ) ಹಾಗೂ ಉಡುಪಿ ಜಿಲ್ಲಾ ತಂಡದ ಮಣಿಶ್ರೀ (ಉತ್ತಮ ಹಿಡಿತಗಾರ್ತಿ) ಪ್ರಶಸ್ತಿ ಪಡೆದುಕೊಂಡರು. ದಿವಾಕರ ಉಪ್ಪಳ ಹಾಗೂ ವಿಜಯ್ ಅತ್ತಾಜೆ ಕಬಡ್ಡಿ ಪಂದ್ಯಾಟದ ನಿರೂಪಕರಾಗಿ ಸಹಕರಿಸಿದರು.
ಸಮಾರೋಪ;
ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಅವರ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅತಿಥಿಗಳಾಗಿದ್ದ ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ, ಕಬಡ್ಡಿ ತರಬೇತುದಾರರೂ ಆದ ಮಾಧವ ಬಿ.ಕೆ., ಕಡಬ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಯಾಕುಬ್ ಹೊಸ್ಮಠ, ಕಬಡ್ಡಿ ಆಯೋಜನಾ ಸಮಿತಿ ಉಪಾಧ್ಯಕ್ಷರೂ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರೂ ಆದ ಕೆ.ಸೇಸಪ್ಪ ರೈಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಚಿಕ್ಕಮಗಳೂರು ತಂಡದ ಕೋಚ್ ಗೋಪಿ ಅವರು ಅನಿಸಿಕೆ ವ್ಯಕ್ತಪಡಿಸಿದರು. ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಸಿ.ಏನೆಕಲ್ಲು, ಕಬಡ್ಡಿ ಆಯೋಜನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್., ಸಂಚಾಲಕ ಕೇಶವ ಅಮೈ ಎಸ್ಆರ್ಕೆ, ಉಪಾಧ್ಯಕ್ಷ ಟಿ.ನಾರಾಯಣ ಭಟ್, ಬೆಂಗಳೂರಿನ ಕ್ವಾಲಿಟಿ ಅಟೋಮೇಶನ್ ಕಂಪನಿ ಎಂ.ಡಿ.ಚಂದ್ರಶೇಖರ ಸಣ್ಣಾರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭುವನೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ.ಬಾಕಿಲ, ಕೆಎಸ್ಎಸ್ಎಸ್ ನೆಟ್ಟಣ ಘಟಕದ ಅಧ್ಯಕ್ಷ ಸುರೇಶ್ ವಿ.ನೆಟ್ಟಣ, ಎಸ್.ಆರ್.ಬಿಲ್ಡರ್ಸ್ ಮತ್ತು ಡೆವಲಪ್ಪರ್ಸ್ನ ಶಿವಪ್ರಸಾದ್ ಇಜ್ಜಾವು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ತ್ಯಾಗಂ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಸದಸ್ಯರಾದ ಸೂರಪ್ಪ ಕುಲಾಲ್, ಜಯಶ್ರೀ ಇರ್ಕಿ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಕೆ., ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಯಿಲ, ಭರತ್ ಸುವರ್ಣ ಎಸ್ಆರ್ಕೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಡಬ ತಾಲೂಕು ಅಮೆಚೂರು ಕಬಡ್ಡಿ ನಿರ್ಣಾಯಕರ ಮಂಡಳಿ ಅಧ್ಯಕ್ಷ ದಿನೇಶ್ ಎಂ.ನೆಟ್ಟಣ ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಬಳಿಕ ತೆಲಿಕೆ ಬಂಜಿ ನಿಲಿಕೆ ಚುರುಮುರಿ ಹಾಸ್ಯ-ನೃತ್ಯ-ಸಂಗೀತ ಕಾರ್ಯಕ್ರಮ ನಡೆಯಿತು.
ಗೌರವಾರ್ಪಣೆ;
ಕಬಡ್ಡಿ ಪಂದ್ಯಾಟಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು, ಮಾಧವ ಬಿ.ಕೆ., ಗಣೇಶ್ ಕಟ್ಟಪುಣಿ, ಕೃಷ್ಣಪ್ರಸಾದ್ ಕಾಂಚನ, ದಿನೇಶ್ ನೆಟ್ಟಣ, ಚಂದ್ರಶೇಖರ ಸಣ್ಣಾರ, ವಿನೀತ್, ಭರತ್ ಸುವರ್ಣ ಎಸ್ಆರ್ಕೆ, ಕಬಡ್ಡಿ ಕೋಚ್ ಜಸ್ವಂತ್, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ತ್ಯಾಗಂ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭುವನೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ.ಬಾಕಿಲ ಅವರನ್ನು ಕಬಡ್ಡಿ ಪಂದ್ಯಾಟ ಆಯೋಜನಾ ಸಮಿತಿಯಿಂದ ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.,ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ನಿರ್ವಹಿಸಿದರು.