ಪುತ್ತೂರು: ನಬಾರ್ಡ್ ಮತ್ತು ಎಸ್ ಡಿ ಸಿ ಸಿ ಬ್ಯಾಂಕ್ ಮಂಗಳೂರು ಇದರ ವತಿಯಿಂದ ಈಶ್ವರಮಂಗಲ ಎಸ್ ಡಿ ಸಿ ಸಿ ಬ್ಯಾಂಕ್ ಶಾಖೆಯಲ್ಲಿ ವಿಶೇಷ ಆರ್ಥಿಕ ಸಾಕ್ಷರತಾ ಕಾರ್ಯಗಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಕೃಷಿಕರಾದ ಕೃಷ್ಣ ಪ್ರಸಾದ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಖಾ ವ್ಯವಸ್ಥಾಪಕ ದಾಮೋದರ್ ಕೆ ಗ್ರಾಹಕರಿಗೆ ಆರ್ಥಿಕ ವ್ಯವಹಾರ, ಸವಲತ್ತು ಮತ್ತು ಹೊಸ ತಂತ್ರಜ್ಞಾನ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಹಾಗೂ ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಹಿರಿಯ ಗ್ರಾಹಕ ಕಮಲಾಕ್ಷರ ಅವರಿಗೆ ಸನ್ಮಾನಿಸಲಾಯಿತು.ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ನಡೆಯಿತು.
ಪ್ರಸನ್ನ ಎ.ಎಂ. ಸ್ವಾಗತಿಸಿದರು ಹಾಗೂ ಉಮಾ ಸಿ.ಎಚ್. ವಂದಿಸಿದರು. ಸಿಬ್ಬಂದಿ ಮನೋಜ್ ಕುಮಾರ್ ಕೆ ನಿರೂಪಿಸಿದರು. ಕರುಣಾಕರ ,ಸಾರಾಫ, ನಿರಂಜನ ರೈ ನೆಲ್ಲಿತ್ತಡ್ಕ ಹಾಗೂ ನಾರಾಯಣ ಕೊಂಕಣಿಗುಂಡಿ ಸಹಕರಿಸಿದರು.
