ಪುತ್ತೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಸಮಾಜಮುಖಿ ಸೇವೆ ಮಾಡುತ್ತಿರುವ ಪುತ್ತೂರಿನ ವಿಜಯ ಸಾಮ್ರಾಟ್ ನೇತೃತ್ವದದಲ್ಲಿ ಸೆ.28ರಂದು ಪುತ್ತೂರುದ ಪಿಲಿಗೊಬ್ಬು ಸೀಸನ್ -3 ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಿತು.
ಎಡನೀರು ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳವರು ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಿದರು. ಪುತ್ತೂರಿನ ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಪಿಲಿಗೊಬ್ಬು ಕಾರ್ಯಕ್ರಮ ಉದ್ಘಾಟಿಸಿದರು.ಪಿಲಿಗೊಬ್ಬು ವೇದಿಕೆಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ನೆರವೇರಿಸಿದರು.
ದ.ಕ.ಜಿಲ್ಲೆಯ ಆಯ್ದ 8 ಹುಲಿವೇಷ ಕುಣಿತ ತಂಡಗಳಿಂದ ಪ್ರದರ್ಶನ ನೀಡಿತು. ಕದ್ರಿ ನವನೀತ್ ಶೆಟ್ಟಿ ಇತರ ಪ್ರಮುಖರು ತೀರ್ಪುಗಾರರಾಗಿ ಪಾಲ್ಗೊಂಡರು.ಹುಲಿವೇಷ ಕುಣಿತವೂ ಜನರ ಮನಸೋರೆಗೊಳಿಸಿದ್ದು ಸ್ಪರ್ಧೆಯಲ್ಲಿ ವೈಯುಕ್ತಿಕ, ಸಮೂಹ,ಓವರ್ ಆಲ್ ಎಂದು ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು.
ಪ್ರಶಸ್ತಿಗಳ ವಿವರ
ಪುತ್ತೂರ್ದ ಪಿಲಿ-
ಪುತ್ತೂರ್ದ ಪಿಲಿ ಪ್ರಶಸ್ತಿಯನ್ನು ಕಲ್ಲೇಗ ಮುರಳಿ ಬ್ರದರ್ಸ್ ಟೈಗರ್ಸ್ ಟ್ರೂಪ್ ತಂಡದ ಪುತ್ತೂರಿನ ವರುಣ್ ಪಡೆದುಕೊಂಡರು.
ವೈಯಕ್ತಿಕ ಬಹುಮಾನದಲ್ಲಿ
ಪಂದ್ಯ ಶ್ರೇಷ್ಠ ಪಿಟ್ಟಿ ಹುಲಿ-
ಪಂದ್ಯ ಶ್ರೇಷ್ಠ ಪಿಟ್ಟಿ ಹುಲಿ ಪ್ರಶಸ್ತಿಯನ್ನು ಎಮ್ ಎಫ್ ಸಿ ಮುಳಿಹಿತ್ಲು, ಮುಳಿಹಿತ್ಲು ಪ್ರೇಂಡ್ಸ್ ಸರ್ಕಲ್ ನ ಶೌರ್ಯ ಪಡೆದುಕೊಂಡರು.
ಪಂದ್ಯ ಶ್ರೇಷ್ಠ ಕಪ್ಪು ಹುಲಿ
ಪಂದ್ಯ ಶ್ರೇಷ್ಠ ಕಪ್ಪು ಹುಲಿ ಪ್ರಶಸ್ತಿಯನ್ನು ಅಗಸ್ತ್ಯ ಅತ್ತಾವರ ಪಡೆದರು.
ಮುಡಿ ಹೊಡೆದ ಪಿಲಿ ವೀರ
ಮುಡಿ ಹೊಡೆದ ಪಿಲಿ ವೀರ ಪ್ರಶಸ್ತಿಯನ್ನು ಲಕೀಶ್ ಪಡೆದರು.
ನಾಣ್ಯ ಗೆದ್ದ ಪ್ರವೀಣ ಹುಲಿ
ನಾಣ್ಯ ಗೆದ್ದ ಪ್ರವೀಣ ಹುಲಿ ಪ್ರಶಸ್ತಿಯನ್ನು ವೈ ಎಫ್ ಸಿ ಯೆಮ್ಮೆಕೆರೆ ತಂಡದ ಪ್ರದ್ವೀನ್ ಶೆಟ್ಟಿ ಪಡೆದುಕೊಂಡರು.
ತಾಯಿ ಹುಲಿ
ತಾಯಿ ಹುಲಿ ಪ್ರಶಸ್ತಿಯನ್ನು ವೈ ಎಫ್ ಸಿ ಯೆಮ್ಮೆಕೆರೆ ತಂಡದ ಅಮೀತ್ ಶೆಟ್ಟಿ ಯೆಮ್ಮೆಕೆರೆ ಪಡೆದುಕೊಂಡರು.
ಪ್ರವೇಶ- ನಿರ್ಗಮಣ:
ಪ್ರವೇಶ- ನಿರ್ಗಮಣ ಪ್ರಶಸ್ತಿಯನ್ನು ವೈ ಎಫ್ ಸಿ ಯೆಮ್ಮೆಕೆರೆ ತಂಡ ಪಡೆದುಕೊಂಡಿತು.
ಶಿಸ್ತಿನ ತಂಡ ಬಹುಮಾನ
ಶಿಸ್ತಿನ ತಂಡ ಬಹುಮಾನ ಪ್ರಶಸ್ತಿಯನ್ನು ಉಪ್ಪಳದ ಶ್ರೀದೇವಿ ಟೈಗರ್ಸ್ ತಂಡ ಪಡೆದುಕೊಂಡಿತು.
ಓವರ್ ಆಲ್ ತಂಡ ಪ್ರಶಸ್ತಿ
ಪ್ರಥಮ ಬಹುಮಾನವನ್ನು ಎಮ್ ಎಫ್ ಸಿ ಮುಳಿಹಿತ್ಲು, ಮುಳಿಹಿತ್ಲು ಪ್ರೇಂಡ್ಸ್ ಸರ್ಕಲ್ ತಂಡ 3ಲಕ್ಷ ಬಹುಮಾನ ಮೊತ್ತವನ್ನು ಪಡೆದುಕೊಂಡು ಸತತವಾಗಿ ಪುತ್ತೂರು ಪಿಲಿಗೊಬ್ಬು ಸ್ಪರ್ಧೆಯಲ್ಲಿ 3 ಬಾರಿ ಬಹುಮಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಯಿತು.
ದ್ವಿತೀಯ ಬಹುಮಾನವನ್ನು ವೈ ಎಫ್ ಸಿ ಯೆಮ್ಮೆಕೆರೆ ತಂಡ ಪಡೆದು 2 ಲಕ್ಷ ಬಹುಮಾನ ಮೊತ್ತ ತನ್ನದಾಗಿಸಿಕೊಂಡಿತು.
ತೃತೀಯ ಬಹುಮಾನವನ್ನು ಮಹಕಾಳಿ ಟೈಗರ್ಸ್ ತೂಮಿನಾಡು ತಂಡ ಪಡೆದು 1ಲಕ್ಷ ಮೊತ್ತ ತನ್ನದಾಗಿಸಿಕೊಂಡಿತು.