ಸವಣೂರಿನಲ್ಲಿ ಅದ್ದೂರಿಯ “ಮಾರ್ನಮಿದ ಗೌಜಿ”

0

ಹುಲಿ ವೇಷ ಜಗತ್ತಿನ ಮನ್ನಣೆ ಪಡೆದಿದೆ- ನಳಿನ್ ಕುಮಾರ್ ಕಟೀಲ್

ಪುತ್ತೂರು: ಜಾನಪದೀಯ ನೃತ್ಯವಾಗಿರುವ ಹುಲಿ ವೇಷ ಜಗತ್ತಿನ ಮನ್ನಣೆಯನ್ನು ಪಡೆದಿದೆ, ಹುಲಿ ವೇಷಕ್ಕೆ ಕೊಡುವ ಗೌರವ, ಭಕ್ತಿ ನಮ್ಮಲ್ಲಿ ಬೆಳೆಯಬೇಕು. ಈ ಸಂಪ್ರದಾಯವನ್ನು ಉಳಿಸುವ ಜವಾಬ್ದಾರಿ ನಮ್ಮಲ್ಲಿ ಇದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ಸೆ. 29 ರಂದು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಸೇವಾ ಭಾರತಿ ಸವಣೂರು ಪ್ರಾಯೋಜಿತದಲ್ಲಿ ಸವಣೂರು ಯುವಕ ಮಂಡಲ ಹಾಗೂ ಬೊಳ್ಳಿ ಬೊಲ್ಪು ತುಳುಕೂಟ ಸವಣೂರು ಇವರ ಆಶ್ರಯದಲ್ಲಿ ಜರಗಿದ “ಮಾರ್ನಮಿದ ಗೌಜಿ” ಕಾರ್‍ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ತುಳುನಾಡು ಕೃಷಿ ಆಧಾರಿತ ಬದುಕನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿನ ಜನರು ಕೃಷಿ ಕಾರ್‍ಯದಷ್ಟೇ ಸಾಂಸ್ಕೃತಿಕ ಬದುಕಿಗೆ ಬಹಳವಾದ ಕೊಡುಗೆಯನ್ನು ನೀಡಿದ್ದಾರೆ. ಸವಣೂರಿನಲ್ಲಿ ಈ ಬಾರಿ ಗಿರಿಶಂಕರ್ ಸುಲಾಯ ನೇತೃತ್ರದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಬಹಳ ಅರ್ಥಪೂರ್ಣವಾಗಿ ಮಾರ್ನಮಿದ ಗೌಜಿ ಕಾರ್‍ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮುಂಬರುವ ವರ್ಷ ದೊಡ್ಡ ಮಟ್ಟದಲ್ಲಿ ಕಾರ್‍ಯಕ್ರಮ ನಡೆಯಲಿ ಎಂದು ಶುಭಹಾರೈಸಿದರು.

ತುಂಬಾ ಸಂತೋಷದ ವಿಚಾರ- ಭಾಗೀರಥಿ ಮುರುಳ್ಯ
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ನಾವು ಹುಲಿ ವೇಷ ಸ್ಪರ್ಧೆಯನ್ನು ಪುತ್ತೂರು ಅಥವಾ ಮಂಗಳೂರಿಗೆ ಹೋಗುವ ಬದಲು ನಮ್ಮ ಸವಣೂರಿನ ಯುವಕರು ತಮ್ಮ ಊರಿನಲ್ಲಿ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಚಾರ, ಹುಲಿ ವೇಷ ಪರಂಪರೆ ಸದಾ ಮುಂದುವರಿಯಲಿ ಎಂದು ಶುಭಹಾರೈಸಿದರು.

ಚಿತ್ರ- ಕಪಿಲಾ ಸವಣೂರು


ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್. ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ನಿರ್ದೇಶಕ ಗಂಗಾಧರ ಪೆರಿಯಡ್ಕ, ಕೃಷಿಕ ಸಮಾಜ ದ.ಕ. ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ರಾಕೇಶ್ ರೈ ಕೆಡೆಂಜಿ, ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ, ಅಶ್ವಿನ್ ಎಲ್ ಶೆಟ್ಟಿ, ಡಾ| ಸುಬ್ರಹ್ಮಣ್ಯ ಭಟ್ ಬರೆಪ್ಪಾಡಿ, ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆ, ಕಡಬ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಮಹೇಶ್ ಕೆ. ಸವಣೂರು, ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು, ಸವಣೂರು ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ, ಅಧ್ಯಕ್ಷ ವಸಂತ ರೈ ಸೊರಕೆ, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಮಾಜಿ ನಿರ್ದೇಶಕ ಪ್ರಕಾಶ್ ಕುದ್ಮನಮಜಲು, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಪ್ರಜ್ವಲ್ ಕೆ.ಆರ್, ದಿವಾಕರ ಬಸ್ತಿ, ಸವಣೂರು ಗ್ರಾಮ ಪಂಚಾಯ್ ಸದಸ್ಯ ತೀರ್ಥರಾಮ ಕೆಡೆಂಜಿ, ಸವಣೂರು ಶ್ರೀರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ಕಾಯರ್ಗ, ಪ್ರಜ್ವಲ್ ಬಂಬಿಲ, ಸವಣೂರು ಅಂಬಾ ಬ್ರದರ್ಸ ಸಂಸ್ಥೆಯ ಬಾಲಚಂದ್ರ ರೈ ಕೆರೆಕ್ಕೋಡಿ ಉಪಸ್ಥಿತರಿದ್ದರು.

ಸವಣೂರಿನ ಉದ್ಯಮಿ ಎನ್. ಸುಂದರ ರೈ ಸವಣೂರುರವರು ಒಂದು ಕಿಂಟ್ವಾಳ್ ಅಕ್ಕಿ ಕೊಡುಗೆಯಾಗಿ ನೀಡಿದರು. ತೀರ್ಪುಗಾರರಾದ ನೃತ್ಯಗುರು ಪ್ರಮೋದ್ ಕುಮಾರ್ ರೈ ಪೆರುವಾಜೆ, ಶಿಕ್ಷಕ ಸದಾನಂದ ರೈ ಕೊವೆಂಜ ಹಾಗೂ ಅಜಿತ್ ಗೌಡ ಐರ್ವನಾಡು ಮತ್ತು ಸಾಮಾಜಿಕ ಜಲತಾಣದಲ್ಲಿ ಅಚ್ಚುಕಟ್ಟಾಗಿ ವೀಡಿಯೋ ಪ್ರೋಮೋ ಮಾಡಿದ ಶಿಕ್ಷಕಿ ಯಶುಭ ರೈ ಹಾಗೂ ತಂಡಗಳ ಸಂಯೋಜಕ ಪ್ರದೀಪ್ ನೆಕ್ಕರೆರವರನ್ನು ಗೌರವಿಸಲಾಯಿತು.

ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಸ್ವಾಗತಿಸಿ, ಬೊಳ್ಳಿ ಬೊಲ್ಪು ತುಳುಕೂಟದ ಪ್ರಧಾನ ಕಾರ್‍ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ವಂದಿಸಿದರು. ಪುಣ್ಚಪ್ಪಾಡಿ ಸಮರ್ಥ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ ಹಾಗೂ ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here