ಪುತ್ತೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಕಂಚುಗಾರ ಪೇಟೆಯ ಶ್ರೀ ಕಾಳಮ್ಮ ದೇವಿ ದೇವಸ್ಥಾನದಲ್ಲಿ ವೇದಮೂರ್ತಿ ಶ್ರಿನೇಶ್ ಶರ್ಮ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದ ಕಾರ್ಯಕ್ರಮಕ್ಕೆ ದ.ಕ. ಲೋಕಾಯುಕ್ತ ಎಸ್.ಪಿ. ಕುಮಾರಚಂದ್ರ ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅನುವಂಶಿಕ ಮೊಕ್ತೇಸರ ರಾಧಾಕೃಷ್ಣ ಮತ್ತು ಆಡಳಿತ ಮೊಕ್ತೇಸರರಾದ ಸುಜಾತ ಕೆ. ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿದೆ.