ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮೇಲೆ ಆಶೀರ್ವಚನ ಕಾರ್ಯಕ್ರಮ ಅ.1 ರಂದು ಬೆಳಿಗ್ಗೆ ನೆರವೇರಿತು.
ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಾದ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್, ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣ, ಕ್ರಿಸ್ಟೋಫರ್ ಕಟ್ಟಿಗೆ ಡಿಪೋ, ತ್ರಿ ಸಿಕ್ಸ್ಟಿ ರೆಸ್ಟೋರೆಂಟ್ & ಬಾರ್, ಕ್ರಿಸ್ಟೋಫರ್ ಪೆಡಲ್ಸ್ & ಫಿಟ್ನೆಸ್ ಸೆಂಟರ್, ಕ್ರಿಸ್ಟೋಫರ್ ದ್ವಿಚಕ್ರ ಸರ್ವಿಸ್ ಸ್ಟೇಷನ್, ಇವುಗಳ ಆಶೀರ್ವಚನ ಕಾರ್ಯಕ್ರಮವನ್ನು ಧರ್ಮಗುರುಗಳು ನೆರವೇರಿಸಿ, ಬೈಬಲ್ ವಾಚಿಸಿ, ಸಂಸ್ಥೆಗಳ ಮೇಲೆ ಪವಿತ್ರ ಜಲ ಸಿಂಪಡಿಸಿ ಮಾತನಾಡಿ, ಪ್ರಾಮಾಣಿಕ ಹಾಗೂ ನಿರಂತರ ಶ್ರಮ ಜೊತೆಗೆ ದೇವರ ಹಾಗೂ ಹಿರಿಯರ ಆಶೀರ್ವಾದದಿಂದ ಕ್ರಿಸ್ಟೋಫರ್ ಸಂಸ್ಥೆಯು ಬೆಳೆದು ನಿಂತಿದೆ. ಪುತ್ತೂರಿನಲ್ಲಿ ಹೆಸರುವಾಸಿಯಾಗಿರುವ ಈ ಕ್ರಿಸ್ಟೋಫರ್ ಸಂಸ್ಥೆಯು ಮತ್ತಷ್ಟು ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ಹಾಗೂ ಅವರ ಪತ್ನಿ ಲೆತ್ತೀಶಿಯ ಮಸ್ಕರೇನ್ಹಸ್, ನಿರ್ದೇಶಕರಾದ ಮನೋಜ್ ಡಾಯಸ್ ಹಾಗೂ ನಿಶಾ ಮಸ್ಕರೇನ್ಹಸ್ ದಂಪತಿ ಅತಿಥಿಗಳನ್ನು ಸ್ವಾಗತಿಸಿದರು. ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಯಿಸ್ ಕಾವೇರಿಕಟ್ಟೆ, ರೋಟರಿ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಅರುಣ್ ರೆಬೆಲ್ಲೋ ದರ್ಬೆ, ರೋಶನ್ ಡಾಯಸ್ ಬಪ್ಪಳಿಗೆ, ಪಾವ್ಲ್ ಮೊಂತೇರೊ ಕಲ್ಲಾರೆ, ಎಡ್ವಿನ್ ಡಿ’ಸೋಜ ದೇವಸ್ಯ, ರೋಶನ್ ಗೊನ್ಸಾಲ್ವಿಸ್ ಆನೆಮಜಲು, ಓಲಿವರ್ ರೆಬೆಲ್ಲೋ ಕೂರ್ನಡ್ಕ, ವಿನ್ಸೆಂಟ್ ಸಿಕ್ವೇರಾ ಬಲ್ನಾಡು, ರೋಯಿಸ್ಟನ್ ಡಾಯಸ್ ಎಪಿಎಂಸಿ ರಸ್ತೆ, ಜೋನ್ ಪೀಟರ್ ಡಿ’ಸಿಲ್ವ ಕಲ್ಲಾರೆ, ಲೂಯಿಸ್ ಮಸ್ಕರೇನ್ಹಸ್ ಎಪಿಎಂಸಿ ರಸ್ತೆ, ಅರುಣ್ ಪಿಂಟೊ ಸಾಮೆತ್ತಡ್ಕ, ಸೂರಜ್ ರೆಬೆಲ್ಲೋ ಮರೀಲು, ಡ್ಯಾನಿ ರೆಬೆಲ್ಲೋ ಮರೀಲು, ದೀಪಕ್ ಡಾಯಸ್ ಎಪಿಎಂಸಿ ರಸ್ತೆ, ಕ್ರಿಸ್ಟೋಫರ್, ಜೋನ್ಸನ್ ಫೆರ್ನಾಂಡೀಸ್ ಎಪಿಎಂಸಿ ರಸ್ತೆ (ಶಿರಸಿ), ಮೆಲ್ವಿನ್ ಫೆರ್ನಾಂಡೀಸ್ ಎಪಿಎಂಸಿ ರಸ್ತೆ, ಜೋನ್ ಮಸ್ಕರೇನ್ಹಸ್ ಕಲ್ಲಿಮಾರು, ರಿತೇಶ್ ಪಾಯಿಸ್ ಕಲ್ಲಾರೆ, ಕ್ರಿಸ್ಟೋಫರ್ ಜಿಮ್ ತರಬೇತುದಾರರಾದ ನವನೀತ್ ಬಜಾಜ್, ಶರಣ್ಯ, ಧನುಷಾ, ಸಂದೀಪ್ ಸಹಿತ ಹಲವರು ಉಪಸ್ಥಿತರಿದ್ದರು.
ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳು..
*ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್
*ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣ
*ಕ್ರಿಸ್ಟೋಫರ್ ಕಟ್ಟಿಗೆ ಡಿಪೋ
*ತ್ರಿ ಸಿಕ್ಸ್ಟಿ ರೆಸ್ಟೋರೆಂಟ್ & ಬಾರ್,
*ಕ್ರಿಸ್ಟೋಫರ್ ಪೆಡಲ್ಸ್ & ಫಿಟ್ನೆಸ್ ಸೆಂಟರ್
*ಕ್ರಿಸ್ಟೋಫರ್ ದ್ವಿಚಕ್ರ ಸರ್ವಿಸ್ ಸ್ಟೇಷನ್