ಪುತ್ತೂರು: ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿ ಕಾರ್ಯಾಚರಿಸುತ್ತಿರುವ ಸಾಯ ಸಂಸ್ಥೆಯ ಎಲ್ಲ ಶಾಖೆಗಳು ಜೊತೆಯಾಗಿ ಪ್ರಧಾನ ಶಾಖೆಯಾದ ಸಾಯ ಎಂಟರ್ಪ್ರೈಸಸ್ ನಲ್ಲಿ ಅ.1 ರಂದು ಆಯುಧ ಪೂಜೆ ನೆರವೇರಿಸಲಾಯಿತು.
ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕೊಡ್ಗಿ, ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಸಾಯ ಸಂಸ್ಥೆಯ ಗೋವಿಂದ ಪ್ರಕಾಶ್ ಸಾಯ, ಪ್ರಜ್ವಲ್ ಸಾಯ, ಸಂಧ್ಯಾ ಸಾಯ, ಕೃಷ್ಣ ಭಟ್ ಕಳಾಯಿ, ಸಾವಿತ್ರಿ ಭಟ್ ಕಳಾಯಿ ಹಾಗೂ ಎಲ್ಲಾ ಶಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಪುರೋಹಿತ ಮಂಜಳಗಿರಿ ಉದನೇಶ್ವರ ಭಟ್ ಅಳಿಕೆ ಇವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಸಿಬ್ಬಂದಿಗಳು ಸುಂದರ ಪೂಕಲಂ ಹಾಕಿ ಚಂದಗಾಣಿಸಿದರು.