ಪ್ರಥಮ ದಿನವೇ ರೂ.5 ಕೋಟಿ ಠೇವಣಿ ಸಂಗ್ರಹ !
ಪುತ್ತೂರು: ಸುದೀರ್ಘ 67 ವರ್ಷಗಳ ಇತಿಹಾಸವಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 17ನೇ ಶಾಖೆಯು ಅ.2ರಂದು ಕಲ್ಲಡ್ಕದ ಕೆ.ಸಿ ರೋಡ್ ಈಶಾನ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ಪ್ರಥಮ ದಿನವೇ ಶಾಖೆಯಲ್ಲಿ ರೂ.5 ಕೋಟಿ ಠೇವಣಿ ಸಂಗ್ರಹ ಆಗಿರುವುದು ದಾಖಲೆಯಾಗಿದೆ.

ನೂತನ ಕಲ್ಲಡ್ಕದ ಶಾಖೆಯನ್ನು ದ.ಕ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ಅಧ್ಯಕ್ಷತೆ ವಹಿಸಿದರು. ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಭದ್ರತಾ ಕೊಠಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ವಿಟ್ಲದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ಕಚೇರಿಯಲ್ಲಿ ದೀಪ ಪ್ರಜ್ವಲಿಸಿದರು.
ಮಂಗಳೂರಿನ ನ್ಯಾಯವಾದಿ ಕುಶಾಲಪ್ಪ ಕುಲಾಲ್ ಗಣಕ ಯಂತ್ರ ಉದ್ಘಾಟಿಸಿದರು. ಗೊಳ್ತಮಜಲು ಗ್ರಾ.ಪಂ ಸದಸ್ಯ ಕೆ.ಮಹಮ್ಮದ್ ಮುಸ್ತಾಫ,ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ., ದ.ಕ ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ನಾರಾಯಣ ಸಿ ಪೆರ್ನೆ, ಈಶಾನ ಕಾಂಪ್ಲೆಕ್ಸ್ ಮ್ಹಾಲಕ ಗೋಪಾಲ್ ಕುಲಾಲ್ ಭಾಗವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಸಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ದಾಮೋದರ್ ಕುಲಾಲ್ ವಂದಿಸಿದರು. ಸಂಘದ ಅಧ್ಯಕ್ಷ ಭಾಸ್ಕರ್ ಎಮ್ ಪೆರುವಾಯಿ, ಉಪಾಧ್ಯಕ್ಷ ದಾಮೋದರ್ ಕುಲಾಲ್, ನಿರ್ದೇಶಕರಾದ ರಂಜಿತಾ, ಪೂವಪ್ಪ ಕಡಂಬಾರು, ಪದ್ಮಕುಮಾರ್, ಪ್ರಶಾಂತ್ ಬಂಜನ್, ಗಣೇಶ್ ಕುಲಾಲ್, ಶೇಷಪ್ಪ ಕುಲಾಲ್, ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್ ಅತಿಥಿಗಳನ್ನು ಗೌರವಿಸಿದರು. ಪ್ರದೀಪ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸಂಘದ ನಿರ್ದೇಶಕರು, ವಿವಿಧ ಶಾಖೆಯ ಪ್ರಮುಖರು ಉಪಸ್ಥಿತರಿದ್ದರು.