ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದಿಂದ ಸ್ವಚ್ಛತಾ ಕಾರ್ಯಕ್ರಮ

0

ಕಾಣಿಯೂರು: ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ವತಿಯಿಂದ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮಾದಿನಾಚರಣೆಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವು ಕಾಣಿಯೂರಿನಲ್ಲಿ ಅ.2ರಂದು ನಡೆಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮೀಜೆ, ಕಾರ್ಯದರ್ಶಿ ದೀಕ್ಷಿತ್ ಕಂಪ, ಉಪಾಧ್ಯಕ್ಷ ಧರ್ಮಪಾಲ ಕಲ್ಪಡ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕೋಶಾಧಿಕಾರಿ ಕೀರ್ತಿಕುಮಾರ್ ಎಳುವೆ, ಯುವಕ ಮಂಡಲದ ಸದಸ್ಯರಾದ ಪರಮೇಶ್ವರ ಅನಿಲ, ಹರ್ಷಿತ್ ಅನಿಲ, ನಿತಿನ್ ಕಲ್ಪಡ, ಮಲ್ಲೇಶ್ ಭಂಡಾರಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here