ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಒಂಬತ್ತನೇ ಮಹಾಸಭೆ

0

ಬಡಗನ್ನೂರು :  ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಒಂಬತ್ತನೇ ಮಹಾಸಭೆಯು ಅ. 2 ವಿಜಯ ದಶಮಿಯಂದು ಕ್ಷೇತ್ರದಲ್ಲಿ ನಡೆಯಿತು.

ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ರವರು ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿ, ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಬಗ್ಗೆ ಚಿಂತನೆ ಮಾಡಲಾಗಿದೆ ಅದರಲ್ಲಿ ಪ್ರಮುಖವಾಗಿ, ಅನ್ನ ಛತ್ರ ಮತ್ತು, ವಸತಿ ಗೃಹ,  ವಸತಿ ಗೃಹ ಈಗಾಗಲೇ ದಿನಾಂಕ ನಿಗದಿಪಡಿಸಿದ್ದು, ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷತೆಯಲ್ಲಿ ನವಂಬರ್ 23ರಂದು ನಡೆಸಲು ಪೂರ್ವ ತಯಾರಿ ನಡೆಯುತ್ತಿದೆ. ಗೆಜ್ಜೆಗಿರಿ ಒಂದು ಕೂಟ ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ಅಭಿವ್ಯಕ್ತ ಪಡಿಸಲು ಅವಕಾಶವಿದೆ ನಾವೇಲ್ಲರೂ ಒಂದು ಕುಟುಂಬ. ವಸತಿ ಗೃಹ ಶಿಲನ್ಯಾಸ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಸಭೆಯಲ್ಲಿ ಕರೆ ನೀಡಿದರು.ಬಳಿಕ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ, ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು.

ವೇದಿಕೆಯಲ್ಲಿ ಗೌರವಾಧ್ಯಕ್ಷ  ಜಯಂತ ನಡುಬೈಲು, ಉಪಾಧ್ಯಕ್ಷ  ಉಲ್ಲಾಸ್ ಕೋಟ್ಯಾನ್ ,ಜೊತೆ ಕಾರ್ಯದರ್ಶಿಳಾದ  ಡಾ. ಸಂತೋಷ್ ಬೈರಂಪಲ್ಲಿ, ಜೈ ವಿಕ್ರಮ ಕಲ್ಲಾಪು,ಉಪಸ್ಥಿತರಿದ್ದರು.

ಸಭೆಯಲ್ಲಿ ಗಣ್ಯರಾದ  ಸತೀಶ್ ಪೂಜಾರಿ ಬೆಳಪು (ದುಬೈ) ಪ್ರಭಾಕರ್ ಕರ್ನಿರೆ , ಸೋಮನಾಥ ಪೂಜಾರಿ ಉಡುಪಿ(ದಕ್ಷಿಣ ಆಫ್ರಿಕ) ಚಂದ್ರಹಾಸ ಅಮೀನ್ ಗೋವಾ, ಸುಜಿತಾ ವಿ ಬಂಗೇರ,  ಸಂಜೀವ ಪೂಜಾರಿ ಬಿರುವ ಸೆಂಟರ್,  ಪ್ರಾಮಲ್ ಕುಮಾರ್ ಕಾರ್ಕಳ,  ಹರಿಶ್ಚಂದ್ರ ಅಮಿನ್ ಕಟಪಾಡಿ, ಶ್ರೀಕುಮಾರ್ ಮೂಡಬಿದ್ರಿ,  ನಾರಾಯಣ ಮಚ್ಚಿನ,  ನವೀನ್ ಅಮೀನ್ ಉಡುಪಿ,  ನವೀನ್ ಸುವರ್ಣ ಸಜೀಪ,  ನವನೀತ್ ಹಿಂಗಾಣಿ,  ನಾಗೇಶ್ ಪೂಜಾರಿ  ಜಯರಾಮ ಬಂಗೇರ,  ಜಯರಾಮ ಪೂಜಾರಿ ಬೀಳುವಾಯಿ, ನಾಗೇಶ್ ಪೂಜಾರಿ ಬೈಕಂಪಾಡಿ,  ರಾಘವೇಂದ್ರ, ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ರವರು ವರ್ಷದ ವರದಿಯನ್ನು ಯಾಚಿಸಿದರು. ಕೋಶಾಧಿಕಾರಿ ಮೋಹನ ದಾಸ್ ಬಂಗೇರ ವಾಮಂಜೂರು ಲೆಕ್ಕಪತ್ರಗಳನ್ನು ಮಂಡಿಸಿದರು.ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ರವರು ವಂದಿಸಿದರು.

ವಿಭಿನ್ನ ರೀತಿಯಲ್ಲಿ ನವರಾತ್ರಿ ಆಚರಣೆ ಚಿಂತನೆ
ಮಂದಿನ ವರುಷ ನವರಾತ್ರಿ ಮಹೋತ್ಸವವನ್ನು ಒಂಭತ್ತು ಮಂದಿ ಮಾತೆಯರ ಮೂಲಕ ವಿಶೇಷ ಪೂಜೆ ಮಾಡುವುದರೊಂದಿಗೆ ವಿಭಿನ್ನ ರೀತಿಯಲ್ಲಿ ನವರಾತ್ರಿ ಮಹೋತ್ಸವ ಆಚರಣೆ ಮಾಡಲಾಗುವುದು ಎಂದು  ಕ್ಷೇತ್ರಾಢಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಹೇಳಿದರು.

LEAVE A REPLY

Please enter your comment!
Please enter your name here