ಬಿರುಮಲೆ ಬೆಟ್ಟದಲ್ಲಿ ಗಾಂಧಿಜಯಂತಿ ಆಚರಣೆ

0

ಪುತ್ತೂರು:ಅ. 2 ರಂದು ಗಾಂಧಿ ಜಯಂತಿ ದಿನದಂದು ಪುತ್ತೂರಿನ ಬಿರುಮಲೆ ಬೆಟ್ಟದ ವೀಕ್ಷಣಾ ಗೋಪುರದಲ್ಲಿ 156ನೇ ವರ್ಷದ ಗಾಂಧಿ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮೊದಲಿಗೆ ಗಾಂಧಿಮಂಟಪದ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಯವರು ನಡೆಸಿಕೊಟ್ಟರು. ಬಿರುಮಲೆ ಬೆಟ್ಟದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಗಜೀವನ್ ದಾಸ್ ರೈಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಪ್ರೊ.ಝೇವಿಯರ್ ಡಿ’ಸೋಜ, ಜೈರಾಜ್ ಭಂಡಾರಿರವರು ಗಾಂಧೀಜಿಯವರ ಆದರ್ಶಗಳ ಕುರಿತು ಮಾತನಾಡಿದರು. ಖಜಾಂಚಿ ಪ್ರೊ. ದತ್ತಾತ್ರೇಯ ರಾವ್ ಗಾಂಧಿ ಭಜನ್ ಪ್ರಸ್ತುತಿ ಪಡಿಸಿದರು.  ಸ್ಥಳೀಯ ನಗರಸಭಾ ಸದಸ್ಯೆ ಇಂದಿರಾ ಆಚಾರ್ಯರು ಶುಭ ಹಾರೈಸಿದರು. ಪ್ರಜ್ಞಾ ಆಶ್ರಮದ ಅಣ್ಣಪ್ಪರವರು ವಂದಿಸಿದರು.

LEAVE A REPLY

Please enter your comment!
Please enter your name here