ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು, ಡಾ. ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಕಣ್ಣನ್ ಕಾಂಪ್ಲೆಕ್ಸ್ ಪುತ್ತೂರು, ಸುರಕ್ಷಾ ವೆಲ್‌ಫೇರ್ ಟ್ರಸ್ಟ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಅ.5ರಂದು ಪೂರ್ವಾಹ್ನ 9.30 ರಿಂದ ಮಧ್ಯಾಹ್ನ 1 ರ ತನಕ ಶ್ರೀ ಸತ್ಯಸಾಯಿ ಮಂದಿರ ವಠಾರದಲ್ಲಿ ನಡೆಯಲಿದೆ.
ಕಣ್ಣಿನ ವಿಶೇಷ ತಜ್ಞ ಡಾ. ಅಶ್ವಿನ್ ಸಾಗರ್‌ರವರು ಸಮಾಲೋಚನೆಗೆ ಶಿಬಿರದಲ್ಲಿ ಲಭ್ಯರಿರುತ್ತಾರೆ. ಲಭ್ಯ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪೊರೆ ಶಸ್ತ್ರ ಚಿಕಿತ್ಸೆಯ ಮಾಹಿತಿಯನ್ನು ಶಿಬಿರದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದರು.