ಕೊಯಿಲ ಗ್ರಾ.ಪಂ.ಸ್ವಚ್ಛತಾ ಪಾಕ್ಷಿಕದ ಸಮಾರೋಪ, ಗಾಂಧಿ ಜಯಂತಿ ಆಚರಣೆ

0

ರಾಮಕುಂಜ: ಕೊಯಿಲ ಗ್ರಾಮ ಪಂಚಾಯತಿ, ಸ್ನೇಹ ಸಂಜೀವಿನಿ ಒಕ್ಕೂಟ ಕೊಯಿಲ ಇದರ ಸಹಯೋಗದಲ್ಲಿ ನಡೆದ ಸ್ವಚ್ಛತಾ ಪಾಕ್ಷಿಕದ ಸಮಾರೋಪ ಸಮಾರಂಭ ಹಾಗೂ ಗಾಂಧಿ ಜಯಂತಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.


ಗ್ರಾ.ಪಂ.ಅಧ್ಯಕ್ಷೆ ಪುಷ್ಪ ಸುಭಾಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಅಭಿವೃದ್ದಿ ಅಧಿಕಾರಿ ಸಂದೇಶ್ ಕೆ.ಎನ್., ಸದಸ್ಯರಾದ ಚಂದ್ರಶೇಖರ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ನೇಹ ಸಂಜೀವಿನಿ ಒಕ್ಕೂಟದ ಪಾದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ, ಸ್ವಚ್ಛತೆಗೆ ಸಂಬಂದಿಸಿದ ರಂಗೋಲಿ ಹಾಕಿದ್ದರು. ಈ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಿಸಲಾಯಿತು.


ಸಂಜಿವೀನಿ ಒಕ್ಕೂಟದ ಎಮ್‌ಬಿಕೆ ವೀಣಾ ಸ್ವಾಗತಿಸಿದರು. ಎಲ್‌ಸಿಆರ್‌ಪಿ ಅಶ್ವಿನಿ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಮ್ಮ ನಿರೂಪಿಸಿದರು.

LEAVE A REPLY

Please enter your comment!
Please enter your name here