ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆ : ಸುಳ್ಯಪದವು ಸರ್ವೋದಯಕ್ಕೆ 1ಚಿನ್ನ,2 ಬೆಳ್ಳಿ,3 ಕಂಚು-ವೈಷ್ಣವಿ ಚಿನ್ನದ ಪದಕದೊಂದಿಗೆ ರಾಜ್ಯಮಟ್ಟಕ್ಕೆ  ಆಯ್ಕೆ

0

ಬಡಗನ್ನೂರು : ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮಂಗಳೂರು ಹಾಗೂ ಆಳ್ವಾಸ್, ವಿದ್ಯಾಸಂಸ್ಥೆ ಮೂಡಬಿದ್ರೆ ಇವರ ಜಂಟಿ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ 17ರ ವಯೋಮಾನದ ಭಾರ ಎತ್ತುವ ಸ್ಪರ್ಧೆಯಲ್ಲಿ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ವೈಷ್ಣವಿ (9ನೇ ತರಗತಿ) ಚಿನ್ನದ ಪದಕದೊಂದಿಗೆ ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 

ಕುಮಾರಿ ಶ್ರೀಶ ಸದಾನಂದ (9ನೇ ತರಗತಿ) ಹಾಗೂ ಅಲ್ ಅಮೀನ್ ಸುಹೈಲ್ (10ನೇ ತರಗತಿ )ಬೆಳ್ಳಿ ಪದಕ ಮತ್ತು ಬಿ.ಎಸ್ ಶ್ರವಿತ್ ಕುಮಾರ್ (10ನೇ ತರಗತಿ), ಮನೀಶ್( 9ನೇ ತರಗತಿ)ಮತ್ತು ಕುಮಾರಿ ಅಕ್ಷತಾ (ಒಂಬತ್ತನೇ ತರಗತಿ) ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ. 

ಇವರಿಗೆ ಸಂಸ್ಥೆಯ ಹಿರಿಯ ವಿದ್ಯಾರ್ಥಿ- ನಿವೃತ ಅಂಚೆ ಇಲಾಖೆ ನೌಕರ-ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕೃಷ್ಣಪ್ರಗೌಡ ಡೆಂಬಾಳೆ ತರಬೇತಿ ನೀಡಿರುತ್ತಾರೆ. 

LEAVE A REPLY

Please enter your comment!
Please enter your name here