ಪುತ್ತೂರು: ಏಕ್ಸಿಸ್ ಮ್ಯಾಕ್ಸ್ ಲೈಫ್ ಇನ್‌ಶ್ಯೂರೆನ್ಸ್ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಕೊಡ ಮಾಡುವ ಪ್ರಶಸ್ತಿಯಲ್ಲಿ ಶೈಕ್ಷಣಿಕ ವಿಭಾಗದಲ್ಲಿ ಪುತ್ತೂರು ಬನ್ನೂರು ಕರ್ಮಲ ನಿವಾಸಿ ಅಶ್ವಿನಿ ರಾಘವೇಂದ್ರ ಶೆಣೈ ಅವರು ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತಗೊಂಡಿದ್ದಾರೆ.
ಇತ್ತೀಚೆಗೆ ಮಂಗಳೂರು ಅತ್ತಾವರ ರೈಲ್ವೇ ಸ್ಟೇಷನ್ ರೋಡ್ ಟ್ರೀನಿಟಿ ಬಿಲ್ಡಿಂಗ್‌ನಲ್ಲಿರುವ ಏಕ್ಸಿಸ್ ಮ್ಯಾಕ್ಸ್ ಲೈಫ್ ಇನ್‌ಶ್ಯೂರೆನ್ಸ್ ಸಂಸ್ಥೆಯಲ್ಲಿ ಈ ಪ್ರಶಸ್ತಿಯನ್ನು ಸಂಸ್ಥೆಯ ವಲಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿಯವರು ಪ್ರದಾನ ಮಾಡಿದರು. ಅಸೋಸಿಯೇಟ್ಸ್ ರೀಜನಲ್ ಮ್ಯಾನೇಜರ್ ಸತೀಶ್ ಮೆನೊನ್, ರಾಘವೇಂದ್ರ ಶೆಣೈ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.
ಅಶ್ವಿನಿ ರಾಘವೇಂದ್ರ ಶೆಣೈ ಅವರು ಪುತ್ತೂರು ಬಪ್ಪಳಿಗೆ ಅಂಬಿಕಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.