ನಿಡ್ಪಳ್ಳಿ; ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕರ್ನಪ್ಪಾಡಿ ನಿಡ್ಪಳ್ಳಿ ಇದರ ವಠಾರದಲ್ಲಿ ಕೊಡಮಣಿತ್ತಾಯ ದೈವದ ನೂತನ ದೈವಸ್ಥಾನ ನಿರ್ಮಾಣಕ್ಕೆ ಅ.6 ರಂದು ಶಂಕುಸ್ಥಾಪನಾ ಕಾರ್ಯಕ್ರಮ ಜರಗಿತು.
ಅಕ್ಷಯ ಕಾಲೇಜು ಸಂಪ್ಯ ಇದರ ಆಡಳಿತ ನಿರ್ದೇಶಕ ಜಯಂತ ನಡುಬೈಲು ಗುದ್ದಲಿ ಪೂಜೆ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಶಂಕುಸ್ಥಾಪನೆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟರ ಸಂಘ ಪುತ್ತೂರು ಇದರ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ನಿಡ್ಪಳ್ಳಿ ಗ್ರಾಮವು ಹಲವು ಧರ್ಮಗಳ ಆಗರ. ಇಂತಹ ಪುಣ್ಯಭೂಮಿಯಲ್ಲಿ ಬಹಳ ಅಭಿವೃದ್ಧಿಯ ಕೆಲಸ ಕಾರ್ಯಗಳು ಇನ್ನಷ್ಟು ನೆರವೇರಲಿ ಎಂದು ಶುಭ ಹಾರೈಸಿದರು. ಅಕ್ಷಯ ಕಾಲೇಜು ಸಂಪ್ಯ ಇದರ ಆಡಳಿತ ನಿರ್ದೇಶಕ ಜಯಂತ ನಡುಬೈಲು ಮನವಿ ಪತ್ರವನ್ನು ವಿತರಿಸಿ ಮಾತನಾಡುತ್ತಾ, ತನು ಮನ ಧನಗಳ ಪೂರ್ಣ ಸಹಕಾರವಿದ್ದರೂ ದೈವ ದೇವರುಗಳ ಅನುಗ್ರಹವಿಲ್ಲದಿದ್ದರೆ ಹುಲ್ಲು ಕಡ್ಡಿಯು ಅಲುಗಾಡಲು ಸಾಧ್ಯವಿಲ್ಲ ಎಂದರು.
ಧಾರ್ಮಿಕ ಪರಿಷತ್ ಕರ್ನಾಟಕ ಇದರ ಸದಸ್ಯರಾದ ಮಲ್ಲಿಕಾ ಪಕ್ಕಳ, ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನ ಪಾಣಾಜೆ ಇದರ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ, ಶಾಂತದುರ್ಗಾ ದೇವಸ್ಥಾನ ನಿಡ್ಪಳ್ಳಿ ಇದರ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಗ್ರಾಮ ಪಂಚಾಯತ್ ನಿಡ್ಪಳ್ಳಿ ಇದರ ಅಧ್ಯಕ್ಷ ವೆಂಕಟರಮಣ ಬೋರ್ಕರ್ ಬ್ರಹ್ಮರಗುಂಡ, ಕುಕ್ಕುತ್ತಡಿ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ಜಯರಾಮ ಪೂಜಾರಿ ಕುಕ್ಕುತ್ತಡಿ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಇದರ ವ್ಯವಸ್ಥಾಪನ ಸಮಿತಿ ಸದಸ್ಯ ಜನಾರ್ಧನ ಪೂಜಾರಿ ಪದಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿಯ ಅಧ್ಯಕ್ಷ ಎನ್. ಶಿವಪ್ಪ ಪೂಜಾರಿ ನುಳಿಯಾಲು ಮಾತನಾಡಿ, ನನಗೆ ಅಷ್ಟೇನೂ ವಿದ್ಯಾಭ್ಯಾಸವಿಲ್ಲ ಆದರೂ ಬಹಳ ವರ್ಷಗಳಿಂದ ಗರಡಿಯಲ್ಲಿ ಸೇವೆ ಮಾಡುತ್ತಿದ್ದೇನೆ. ಇವೆಲ್ಲವೂ ಕಾರಣಿಕ ಶಕ್ತಿಗಳ ಮಹಿಮೆ. ಕೊಡಮಣಿತ್ತಾಯ ದೈವಸ್ಥಾನದ ಅಭಿವೃದ್ಧಿಗೆ ಸರ್ವರೂ ಕೈಜೋಡಿಸಬೇಕಾಗಿ ವಿನಂತಿಸಿ ಕೊಂಡರು.
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ ಇಲ್ಲಿಯ ಮುಖ್ಯ ಗುರು ರಾಜೇಶ್ ಎನ್ ಸ್ವಾಗತಿಸಿ, ಸಂತೋಷ್ ಕುಮಾರ್ ಕಾನ ವಂದಿಸಿದರು. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸೇರಿದಂತೆ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಸದಸ್ಯರು,ಕರ್ನಪ್ಪಾಡಿ ಮನೆಯವರು ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.
ಕೊಡಮಣಿತ್ತಾಯ ದೈವದ ದೈವಸ್ಥಾನ ನಿರ್ಮಾಣ ಆಗಬೇಕು ಎಂದು ಕಂಡು ಬಂದ ಹಿನ್ನೆಲೆಯಲ್ಲಿ ದೈವಸ್ಥಾನ ನಿರ್ಮಾಣಕ್ಕೆ ನಿರ್ಣಯ ಮಾಡಿ ಶಂಕುಸ್ಥಾಪನೆ ಮೂಲಕ ಕೆಲಸ ಕೈಗೆತ್ತಿ ಕೊಳ್ಳಲಾಗಿದೆ. ಅಂದಾಜು ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ದೈವಸ್ಥಾನವು ಬರುವ ವಾರ್ಷಿಕ ನೆಮೋತ್ಸವಕ್ಕೆ ಪ್ರತಿಷ್ಠೆ ಮಾಡಲು ಸಂಕಲ್ಪ ಮಾಡಲಾಗಿದೆ.ಈ ಪುಣ್ಯದ ಕಾರ್ಯಕ್ಕೆ ಊರ ಪರವೂರ ಭಕ್ತಾದಿಗಳ ಸಹಕಾರ ಮುಖ್ಯವಾಗಿದೆ.
ಎನ್. ಶಿವಪ್ಪ ಪೂಜಾರಿ ನುಳಿಯಾಲು
ಅಧ್ಯಕ್ಷರು, ಗರಡಿ ಸೇವಾ ಸಮಿತಿ.