ನಿಡ್ಪಳ್ಳಿ; ಇಲ್ಲಿಯ ಹೋಲಿ ರೋಜರಿ ಅಮ್ಮನವರ ದೇವಾಲಯದಲ್ಲಿ ಜಪಮಾಲೆ ಮಾತೆಯ ಹಬ್ಬವನ್ನು ಅ.7 ರಂದು ಸಂಜೆ ದಿವ್ಯ ಬಲಿ ಪೂಜೆಯೊಂದಿಗೆ ಆರಂಭಿಸಲಾಯಿತು.
ಪುತ್ತೂರು ಚರ್ಚ್ ಧರ್ಮಗುರು ರೇ. ಫಾ.ಲಾರೆನ್ಸ್ ಮಸ್ಕರೇನಸ್ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು.ನಂತರ ಶೃಂಗರಿಸಿದ ಮಾತೆ ರೋಜರಿ ಅಮ್ಮನವರ ಪ್ರತಿಮೆಯನ್ನು ತೆರೆದ ವಾಹನದಲ್ಲಿ ಜಪಮಾಲೆ ಪ್ರಾರ್ಥನೆಯೊಂದಿಗೆ ದೇವಾಲಯದ ಆವರಣದಿಂದ ರೆಂಜದವರೆಗೆ ಮೆರವಣಿಗೆ ನಡೆಸಲಾಯಿತು. ರೆಂಜದಲ್ಲಿ ಸರ್ವಧರ್ಮದವರ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ನಿಡ್ಪಳ್ಳಿ ಚರ್ಚ್ ಧರ್ಮಗುರು ವಂ. ಸಂತೋಷ್ ಮಿನೇಜಸ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಸ್ವಸ್ತಿ ಡಿ’ ಸೋಜಾ, ಕಾರ್ಯದರ್ಶಿ ಅಶೋಕ್ ಪೆಡ್ಡಿ ಡಿ’ ಸೋಜಾ, ಸಂಚಾಲಕಿ ಸೋನಿಯಾ ಡಿ’ ಸೋಜಾ ಮತ್ತು ಚರ್ಚ್ ಪಾಲನಾ ಮಂಡಳಿ ಸದಸ್ಯರು ಸಹಕರಿಸಿದರು.