ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ಅಜಿಲಾಡಿ ಬೀಡು ಬುಲೇರಿಕಟ್ಟೆ ಸುಶೀಲ ಬಾಲಕೃಷ್ಣ ಶೆಟ್ಟಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲಂಕಾರು: ವಿಟ್ಲಪಡ್ನೂರು ಗ್ರಾಮದ ಏರ್ಮನಿಲೆ ದಿ. ಬಾಲಕೃಷ್ಣ ಶೆಟ್ಟಿ ಯವರ ಪತ್ನಿ ಅಜಿಲಾಡಿ ಬೀಡು ಬುಲೇರಿಕಟ್ಟೆ ಸುಶೀಲ ಬಾಲಕೃಷ್ಣ ಶೆಟ್ಟಿ ಸೆ.26 ರಂದು
ನಿಧನರಾಗಿದ್ದು ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಅ.9 ರಂದು ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.

ಹಿರಿಯರಾದ ನರಿಮೊಗರು ಮೋಹನ ರೈ ಯವರು ನುಡಿನಮನ‌ ಸಲ್ಲಿಸಿ ಅಜಿಲಾಡಿಬೀಡು ಬುಲ್ಲೇರಿಕಟ್ಟೆ ಸುಶೀಲ ಬಾಲಕೃಷ್ಣ ಶೆಟ್ಟಿ ಯವರು ಮಂಡಲ ಪಂಚಾಯತ್ ಸದಸ್ಯರಾಗಿ ವಿವಿಧ ಕ್ಷೇತ್ರ ಗಳಲ್ಲಿ ಸಾಮಾಜಿಕ, ಧಾರ್ಮಿಕ ಕ್ಷೇತ್ರ ಗಳಲ್ಲಿ ತನ್ನನು ತಾನು ತೊಡಗಿಸಿಕೊಂಡವರು .ಆದರ್ಶ ಗೃಹಿಣಿಯಾಗಿ ಮಕ್ಕಳಿಗೆ ಸಂಸ್ಕಾರಯುತ ಜೀವನವನ್ನು ಕಲಿಸಿಕೊಟ್ಟವರು ಎಂದು ತಿಳಿಸಿ ಅಗಲಿದ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು. ನಂತರ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ,ಮೃತರ ಭಾವಚಿತ್ರಕ್ಕೆ ಅಗಮಿಸಿದ ಬಂಧುಮಿತ್ರರು ಪುಷ್ಪಾರ್ಚನೆ ಸಲ್ಲಿಸಿದರು.

ವೇದಿಕೆಯಲ್ಲಿ ಮೃತರು ಮಗ ಅಜಿಲಾಡಿಬೀಡು ಅಜಿತ್ ಕುಮಾರ್ ಶೆಟ್ಟಿ, ಮಗಳು ವಕೀಲರಾದ ಅರುಣಾ ಧಿನಕರ ರೈ,ಸೊಸೆ ಲೊಮಿತಾ,ಅಳಿಯ ವಕೀಲರಾದ ಆರುವಾರ ದಿನಕರ ರೈ ಮತ್ತು ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here