ಪುತ್ತೂರಿನ ಸಾಂಸ್ಕ್ರತಿಕ ರಂಗಕ್ಕೆ ಹೊಸ ಮೆರುಗು ನೀಡಿದ ಪುತ್ತೂರು ಶಾರದೋತ್ಸವ

0

ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರಿಂದ ಪ್ರತಿ ವರ್ಷ ಹೊಸತನ

ಪುತ್ತೂರು: ಉತ್ಸವ ಎಂದಾಕ್ಷಣ ಎಲ್ಲೆಲ್ಲೂ ಸಾಂಸ್ಕ್ರತಿಕ ಮೆರುಗು ಸಾಮಾನ್ಯ. ಶೋಭಾಯಾತ್ರೆ ಎಂದಾಕ್ಷಣ ಒಂದಷ್ಟು ಸ್ತಬ್ದ ಚಿತ್ರಗಳು ಸಾಮಾನ್ಯ. ಆದರೆ ಶೋಭಾಯಾತ್ರೆಯಲ್ಲಿ ಸ್ತಬ್ದಚಿತ್ರವಿಲ್ಲದೆ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವ ಮೂಲಕ ಸಾಂಸ್ಕೃತಿಕ ರಂಗಕ್ಕೆ ಹೊಸ ಮೆರುಗನ್ನು ಸೀತಾರಾಮ ರೈ ಕೆದಂಬಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಪುತ್ತೂರಿನ ಶಾರದೋತ್ಸವದಲ್ಲಿ ಕಂಡು ಬಂದಿದೆ.


ಶೋಭಯಾತ್ರೆಯಲ್ಲಿ ಸ್ತಬ್ದ ಚಿತ್ರಗಳಿಲ್ಲದೆ ಪೌರಾಣಿಕ ವಿಚಾರ ಮುಂದಿಟ್ಟು, ಸಾಂಪ್ರದಾಯಕ್ಕೆ ಮಹತ್ವ ನೀಡಿ ಬಣ್ಣ ಹಚ್ಚಿ ಕಲಾಕ್ಷೇತ್ರದ ಪ್ರದರ್ಶನ ಎಲ್ಲರ ಮನವನ್ನು ಮುಟ್ಟಿದೆ. ಕರ್ನಾಟಕ, ಕೇರಳ ಹಾಗೂ ತುಳುನಾಡಿನ ವೈವಿಧ್ಯಮಯ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿತ್ತು.

ಚೆಂಡೆ ಮೇಳ, ವಾದ್ಯ ಘೋಷ, ವಾದ್ಯ ವೃಂದದ ಜೊತೆಗೆ 300 ಮಂದಿಯ ಕುಣಿತ ಭಜನೆಗಳು. ಅದರಲ್ಲೂ ವಿಶೇಷವಾಗಿ ಕೇರಳದ ತ್ರಿಶೂರಿನ ಪಂದಳಾಟಮ್, ಸಿಂಗಾರಿ ಕಾವಡಿ, ಪಾಲಕ್ಕಾಡಿನ ಪ್ಲವರ್ ಡ್ಯಾನ್ಸ್, ತ್ರಿಶೂರ್‌ನ ದೇವಿ ಬೋರ್ಡ್, ಸಹಸ್ರಬೆಳಕು ಕಲಾತಂಡ, ದೇವಂ ನೃತ್ಯ ಕಲಾ ತಂಡ, ವೀಳಕಟ್ಟಾಂ, ಸಿಂಗಾರಿ ಕಾಪಾಡಿ ಕಲಾತಂಡ, ಕರಿಂಕಾಳಿ ತಂಡ, ಕಥಕಲಿ ತಂಡ, ಪೂಕಾವಡಿ ತಂಡ, ಆಂದ್ರದ ಕಲಾತಂಡದ ಕೊಟ್ಟಾಯಂನ ಗರುಡ ಯಾನ ಇವೆಲ್ಲ ಪುತ್ತೂರಿಗೆ ಹೊಸದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ಮತ್ತಷ್ಟು ಹೊಸ ಕಲೆಗಳು ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಪುತ್ತೂರಿಗೆ ಸದಾ ಹೊಸತನವನ್ನು ತರುವಲ್ಲಿ ಪುತ್ತೂರು ಶಾರದೋತ್ಸವ ಯಶಸ್ವಿಯಾಗಿದೆ.

LEAVE A REPLY

Please enter your comment!
Please enter your name here