ಪುತ್ತೂರು: ಅ.20ರಂದು ಪುತ್ತೂರಿನಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರ ಸಭೆ ತಿಂಗಳಾಡಿ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು. ಉದ್ಯಮಿ ನಿಹಾಲ್ ಪಿ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಆಮಂತ್ರಣ ಪತ್ರವನ್ನು ಗ್ರಾಮಸ್ಥರಿಗೆ ನೀಡಿದರು.

ಈ ಸಂದರ್ಭದಲ್ಲಿ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಉದ್ಯಮಿಗಳಾದ ರಮೇಶ್ ರೈ ಡಿಂಬ್ರಿ, ಎ.ಕೆ ಮೇರ್ಲ, ಪುರಂದರ ರೈ ಕೊರಿಕ್ಕಾರ್, ಮನೋಹರ್ ರೈ ಎಂಡೆಸಾಗ್, ಮೆಲ್ವಿನ್ ಮೊಂತೆರೋ, ನೌಶಾದ್ ತಿಂಗಳಾಡಿ, ಸೋಮಯ್ಯ, ರಾಮಣ್ಣ ರೈ ಕೊರಿಕ್ಕಾರ್, ರಾಕೇಶ್ ರೈ ಬೋಳೋಡಿ, ಹೈದರ್ ಗಟ್ಟಮನೆ, ಗೋಪಾಲಕೃಷ್ಣ ರೈ ಚಾವಡಿ, ಭಾಸ್ಕರ ನಾಯ್ಕ, ಉಮೇಶ್ ಮಾರುತಿಪುರ, ಹಾರಿಸ್ ಬೋಳೋಡಿ, ಶೇಖರ್ ರೈ, ಲಲಿತ, ರೇಷ್ಮಾ, ಮೇಲ್ವಿನ್, ರಮಣ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.