ಈಡನ್ ಗ್ಲೋಬಲ್ ಸ್ಕೂಲ್‌ನ ಹಿಂದಿ ಶಿಕ್ಷಕ ಇಮ್ತಿಯಾಝ್‌ರವರಿಗೆ ರಾಷ್ಟ್ರ ಭಾಷಾ ಸೇವಾ ರತ್ನ ಪ್ರಶಸ್ತಿ

0

ಪುತ್ತೂರು: ಕವಿತ್ತ್ ಕರ್ಮಮಣಿ ಫೌಂಡೇಶನ್ ಹಿಂದಿ ಭಾಷಾ ವಿಷಯ ಸಾಧಕರಿಗೆ ನೀಡುವ ರಾಷ್ಟ್ರಭಾಷಾ ಸೇವಾ ರತ್ನ ಪುರಸ್ಕಾರವನ್ನು ಬೆಳಂದೂರು ಈಡನ್ ಗ್ಲೋಬಲ್ ಶಾಲೆಯ ಹಿಂದಿ ವಿಷಯದ ಶಿಕ್ಷಕ ಇಮ್ತಿಯಾಝ್ ಸಿ.ಎಂ ಪಡೆದುಕೊಂಡಿದ್ದಾರೆ.


ಕಳೆದ ಏಳು ವರ್ಷಗಳಿಂದ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಸ್ತುತ ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿ ವಿಷಯದಲ್ಲಿ ನೂರು ಅಂಕ ಪಡೆದ ವಿದ್ಯಾರ್ಥಿಗಳಾದ ರಿಫಾ ಫಾತಿಮಾ, ಆಯಿಷಾ ಇಫಾ, ಮುಹಮ್ಮದ್ ಅಝೀಂ, ಮುಹಮ್ಮದ್ ಸುಹಾನ್ ಅವರಿಗೆ ಹಿಂದಿ ರತ್ನ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಾದ ಅರ್ಶಾನ, ಅಮ್ನ ಫಾತಿಮಾ, ಅಬ್ದುಲ್ ಬಾರಿ, ಮುಹಮ್ಮದ್ ಶಾಯೀಝ್, ನಾಸಿಂ ಅಬೂಬಕ್ಕರ್, ಫಾತಿಮಾ ನಿಮಿಯ, ಮುಹಮ್ಮದ್ ತಸ್ನೀಫ್, ಆಯಿಷಾ ಸಿಮ್ರ ಅವರು ರಾಷ್ಟ್ರ ಭಾಷಾ ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here