ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ಖಾಲಿಯಿರುವ ಸಾಲಗಾರ ಕ್ಷೇತ್ರದ ಮಹಿಳಾ ಮೀಸಲು ಸ್ಥಾನಕ್ಕೆ ಅ.19ರಂದು ಚುನಾವಣೆ ನಡೆಯಲಿದ್ದು ಈಗಾಗಲೇ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಮಿತ ಹಿಂದಾರು, ಶಾರದಾ ಬಂಡಿಕಾನ, ರೇವತಿ ಪಜಿಮಣ್ಣು ಹಾಗೂ ಚೇತನ ಕೆ ಹಿಂದಾರು ನಾಮಪತ್ರ ಸಲ್ಲಿಸಿದ್ದು ಅ.13ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.