ಪುತ್ತೂರು: ಮೆಸ್ಕಾಂನ ಪುತ್ತೂರು ನಗರ ವಿಭಾಗದ ಕಚೇರಿಯಲ್ಲಿ ಅ.14ರಂದು ನಡೆಯ ಬೇಕಿದ್ದ ಪುತ್ತೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳ ಜನ ಸಂಪರ್ಕ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.
ಮೆಸ್ಕಾಂ ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಿದ್ದ ಪುತ್ತೂರು ನಗರ ಮತ್ತು ಕುಂಬ್ರ ಗ್ರಾಮಾಂತರ ವಿಭಾಗದ ಜನ ಸಂಪರ್ಕ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮೂಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.